Ad imageAd image

ಜಿಲ್ಲೆಯ 22 ಹೊಸ ಬಸ್ ಮಾರ್ಗಗಳಿಗೆ ಪ್ರಾಧಿಕಾರ ಅನುಮತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಾದೇಶಿಕ ಎಣ್ಣೆಬೀಜ ಬೆಳಗಾರರ ಸಂಘದ ವಾಹನಗಳ ಮೇಲೆ, ಅವರ ಕಂಪನಿಗಳಿಗೆ ಸಂಬಂಧಿಸಿದ ಎಣ್ಣೆ ಉತ್ಪನ್ನಗಳಿಗೆ ಜಾಹೀರಾತು ಅಳವಡಿಕೆಗೆ ಅನುಮತಿ ನೀಡಲಾಗಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಎಣ್ಣೆ ಬೀಜ ಬೆಳೆಗಾರರು ಹಾಗೂ ಎಣ್ಣೆ ಉತ್ಪಾದಕ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ತಮ್ಮದೇ ಕಂಪನಿಗಳ ಎಣ್ಣೆ ಉತ್ಪನ್ನ ಜಾಹೀರಾತು ಅಳವಡಿಸಲು ಅನುಮತಿ ನೀಡುವಂತೆ ಪ್ರಾಧಿಕಾರದಲ್ಲಿ ಮನವಿ ಮಾಡಿದ್ದರು.  ಸಾರಿಗೆ ಪ್ರಾಧಿಕಾರವು ಮಧ್ಯಮಗಾತ್ರದ ಸರಕು ಸಾಗಾಣಿಕೆ ವಾಹನಗಳಿಗೆ ವಾರ್ಷಿಕ ರೂ.750 ರಂತೆ ಹಾಗೂ ಭಾರಿ ಗಾತ್ರದ ಸರಕು ಸಾಗಾಣಿಕೆ ವಾಹನಗಳಿಗೆ ವಾರ್ಷಿಕ ರೂ.2000 ಶುಲ್ಕ ವಿಧಿಸಿ ಜಾಹೀರಾತು ಅಳವಡಿಸಲು ಅನುಮತಿ ನೀಡಿದೆ.

ಸಭೆಯಲ್ಲಿ ಮಜಲು ವಾಹನಗಳ ರಹದಾರಿಗೆ ಸಂಬಂದಪಟ್ಟಂತೆ ಒಟ್ಟು 68 ವಿಷಯಗಳು ಮಂಡನೆಯಾದವು. ಇವುಗಳಲ್ಲಿ 22 ಪರಿಷ್ಕೃತ ವೇಳಾಪಟ್ಟಿ ವಿಷಯಗಳಿಗೆ ಪ್ರಾಧಿಕಾರವು ಅನುಮೋದಿಸಿ, ಕಾರ್ಯದರ್ಶಿಯವರಿಗೆ ವೇಳಾಪಟ್ಟಿಯ ಸಭೆಯನ್ನು ಕರೆದು ಪರಿಷ್ಕೃತ ವೇಳಾಪಟ್ಟಿ ನಿಗದಿಪಡಿಸಲು ಸೂಚಿಸಿತು.

 ಮಾರ್ಗದ ಕಡಿತ ಹಾಗೂ ಮಾರ್ಗದ ವಿಸ್ತರಣೆ ಹಾಗೂ ಇತರೆ ನ್ಯಾಯಾಲಯದಿಂದ ಪ್ರಾಧಿಕಾರದ ಪರಿಗಣನೆಗೆ ಸ್ವೀಕೃತಿಯಾದ ವಿಷಯಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರ ಪರ ವಕೀಲರಿಗೆ ಲಿಖಿತ ಹೇಳಿಕೆಗಳನ್ನು ದಾಖಲಿಸಲು 15 ದಿವಸಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆದಾರರ ಪರ ವಕೀಲರಿಗೆ ಬಗೆಗಿನ ವಿಷಯಗಳಿಗೆ ಆಕ್ಷೇಪಣೆ ಸಲ್ಲಿಸಲು 10 ದಿವಸಗಳ ಕಾಲಾವಕಾಶ ನೀಡಲಾಗಿದೆ.   ವಿಷಯಗಳ ಕುರಿತು ಕಾನೂನುತ್ಮಾಕವಾಗಿ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ಕುಮಾರ್ ಬಂಡಾರು, ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ ಎಂ ಕಾಳಿಸಿಂಗೆ, ಪ್ರಾದೇಶಿಕ ಸಾರಿಗೆ ಇಲಾಖೆಯ ಹೇಮಂತ್ ಕುಮಾರ್, ಖಾಸಗಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಬಿ.ಎಲ್. ಲಿಂಗಾರೆಡ್ಡಿ ಸೇರಿದಂತೆ ಖಾಸಗಿ ಬಸ್ ಸಂಘದ ಕಾರ್ಯದರ್ಶಿ, ಖಜಾಂಚಿ, ಸಂಘದ ಸದಸ್ಯರು, ಬಸ್ಸು ಮಾಲೀಕರು, ವಕೀಲರು ಸಭೆಯಲ್ಲಿದ್ದರು.

 

 

- Advertisement -  - Advertisement - 
Share This Article
error: Content is protected !!
";