ಪಕ್ಷ ವಿರೋಧಿ ಚಟುವಟಿಕೆ ಕಾಂಗ್ರೆಸ್‌ನಿಂದ ಕವಿತಾ ರೆಡ್ಡಿ ಅಮಾನತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ವಕ್ತಾರೆ ಕವಿತಾ ರೆಡ್ಡಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಆದೇಶ ಹೊರಡಿಸಿದೆ.

ಕೆಪಿಸಿಸಿ ‌ಮಹಿಳಾ ಘಟಕಕ್ಕೆ ಸೌಮ್ಯಾರೆಡ್ಡಿ ನೇಮಕ ಹಾಗೂ ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ಸೇರಿದಂತೆ, ಪಕ್ಷದ ಕೆಲ ಆಂತರಿಕ ವಿಚಾರಗಳ ಬಗ್ಗೆ ಕವಿತಾ ರೆಡ್ಡಿ ಅವರು ಕೆಲ ದಿನಗಳ ಹಿಂದೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಈ ಬಗ್ಗೆ ಕವಿತಾ ರೆಡ್ಡಿ ಅವರಿಗೆ ರಾಜ್ಯ ಕಾಂಗ್ರೆಸ್‌ಶಿಸ್ತು ಪಾಲನಾ ಸಮಿತಿ ನೋಟಿಸ್ ನೀಡಿತ್ತು. ಕವಿತಾ ರಡ್ಡಿ ಅವರನ್ನು ಅಮಾನತುಗೊಳಿಸಲಾಗಿದ್ದು, ಅವರು ಪಕ್ಷದಲ್ಲಿ ಹೊಂದಿರುವ ಎಲ್ಲಾ ಹುದ್ದೆಗಳನ್ನು ಅಮಾನತ್ತಿನಲ್ಲಿಡಲಾಗಿದೆಎಂದು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್‌ಪತ್ರದಲ್ಲಿ ಆದೇಶದಲ್ಲಿ ತಿಳಿಸಿದ್ದಾರೆ.

 ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗಿನಿಂದಲೂ ನನಗೆ ಪಕ್ಷದಲ್ಲಿ ನ್ಯಾಯ ಸಿಕ್ಕಿಲ್ಲ; ನನಗೆ ಬಹಳಷ್ಟು ಅನ್ಯಾಯವಾಗಿದೆ, ಅದಕ್ಕೆ ನ್ಯಾಯ ಸಿಕ್ಕಿಲ್ಲ ಎನ್ನುವುದು ಅವರಿಗೂ ಗೊತ್ತಿದೆ. ನನಗೆ ನೋಟಿಸ್ ಯಾಕೆ ಕಳಿಸಿದ್ದಾರೆ ಎಂಬುದು ಪಕ್ಷದ ಶಿಸ್ತು ಪಾಲನಾ ಸಮಿತಿಗೆ ಗೊತ್ತಿಲ್ಲ. ನಾನು ಕಳಿಸಿರುವ 32 ಪುಟಗಳ ಸ್ಪಷ್ಟನೆಗೆ ಅವರಿಂದ ಯಾವುದೇ ಉತ್ತರ ಬಂದಿಲ್ಲಎಂದರು.

 ನನಗೆ ನೋಟಿಸ್ ಕೊಟ್ಟಿರುವ ಉದ್ದೇಶ ಸ್ಪಷ್ಟವಾಗಿದೆ; ಮೊದಲೆನೆಯದಾಗಿ ನಾನು ಪರಿಶಿಷ್ಟ ಪಂಗಡದ ಹೆಣ್ಣು ಮಗಳಾದ ಭವ್ಯಾ ಸಿಂಗ್ ಪರವಾಗಿ ನಿಂತಿದ್ದು. ಮತ್ತೊಂದು, ರಾಮಲಿಂಗಾ ರೆಡ್ಡಿ ಅವರನ್ನು ವಿರೋಧಿಸಿದ್ದು. ನನ್ನ ಮೇಲಿನ ಕ್ರಮಕ್ಕೆ ಇವೇ ಪ್ರಮುಖ ಕರಾಣಗಳು. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಖಿನ್ನತೆಗೆ ಒಳಗಾಗಿದ್ದಾರೆ; ಅವರು ಅದರಿಂದ ಹೊರಗಡೆ ಬರಬೇಕಾದರೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕುಎಂದು ಹೇಳಿ, ತರಾತುರಿಯಲ್ಲಿ ನಿರ್ಧರಿಸಿದರೆ ನಾವು ಏನು ಮಾಡುವುದಕ್ಕೆ ಸಾಧ್ಯಎಂದು ಪ್ರಶ್ನಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";