ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರ ಹುದ್ದೆಗಾಗಿ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ನಿವೃತ್ತ ಅಥವಾ ಮರು ಉದ್ಯೋಗ / ಸೇವೆಯಿಂದ (ನಿವೃತ್ತಿಯಾಗಲಿರುವ) ಶಾಶ್ವತ ನಿಯಮಿತ ನಿಯೋಜಿತ (ಪಿಆರ್ಸಿ) ಬ್ರಿಗೇಡಿಯರ್ ಮತ್ತು ಕರ್ನಲ್ (ಆಯ್ಕೆ ದರ್ಜೆ) ದರ್ಜೆ ಅಧಿಕಾರಿಗಳಿಂದ ಅಥವಾ ನೌಕಾಪಡೆ ಮತ್ತು ವಾಯು ಸೇನೆಯಲ್ಲಿ ಅವರ ಸಮಾನ ಶ್ರೇಣಿಯ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  

ಪುನ: ನೇಮಕಗೊಂಡ ಮತ್ತು ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು (ನಿವೃತ್ತರಾಗಲಿರುವ) ಹುದ್ದೆಗೆ ಅರ್ಜಿ ಸಲ್ಲಿಸುವವರು ತಮ್ಮ ಅರ್ಜಿಗಳನ್ನು ತಮ್ಮ ತಕ್ಷಣದ ಮೇಲಧಿಕಾರಿಗಳ ಮೂಲಕ ಎನ್..ಸಿ ಪಡೆದು   ರವಾನಿಸುವುದು.

ಬ್ರಿಗೇಡಿಯರ್ (ನೌಕಾಪಡೆ ಮತ್ತು ವಾಯು ಸೇನೆಯಲ್ಲಿನ ಸಮಾನ ದರ್ಜೆ ಅಧಿಕಾರಿ) ಶ್ರೇಣಿಯ ಸೂಕ್ತ ನಿವೃತ್ತ ಅಧಿಕಾರಿ ಲಭ್ಯವಿಲ್ಲದಿದ್ದಲ್ಲಿ ಮಾತ್ರ ಕರ್ನಲ್ (ನೌಕಾಪಡೆ ಮತ್ತು ವಾಯು ಸೇನೆಯಲ್ಲಿನ ಸಮಾನ ದರ್ಜೆಯ ಅಧಿಕಾರಿ) ಶ್ರೇಣಿಯ ನಿವೃತ್ತ ಅಧಿಕಾರಿಯನ್ನು ನೇಮಿಸಲಾಗುವುದು.

ಅರ್ಹತೆಯ ಮಾನದಂಡ ವಯಸ್ಸಿನ ಮಿತಿ . 01 ಜನವರಿ 2025 ರಂದು 58 ವರ್ಷ ಮೀರಿರ ಬಾರದು. ಕನ್ನಡದ ಕಾರ್ಯಜ್ಞಾನ, ಅಂದರೆ ಓದಲು, ಬರೆಯಲು ಮತ್ತು ಮಾತನಾಡಲು ಅರ್ಹರಿರಬೇಕು. ಅಧಿಕಾರಾವಧಿಯು ಐದು ವರ್ಷಗಳವರೆಗೆ ಇರುತ್ತದೆ, ಅಥವಾ 60 ವರ್ಷ ವಯಸ್ಸಿನವರೆಗೆ. (ಯಾವುದು ಮೊದಲೊ ಅದು)  ಸೇವೆಯ ನಿಯಮಗಳು ಮತ್ತು ಷರತ್ತುಗಳುವೇತನ ಮತ್ತು ಭತ್ಯೆ, ರಜೆ, ಶಿಸ್ತು ಇತ್ಯಾದಿಗಳಲ್ಲಿ ರಾಜ್ಯ ಸರ್ಕಾರದ ನಿಯಮಗಳು ಅನ್ವಯವಾಗುತ್ತವೆ. ಅರ್ಜಿಗಳನ್ನು ಮೊಹರು ಮಾಡಿದ ಕವರ್ಗಳಲ್ಲಿ  ಅರ್ಜಿಗಳ ಹಾರ್ಡ್ ಪ್ರತಿಗಳು (ನಕಲಿನಲ್ಲಿ), ಎರಡು ಪಾಸ್ ಪೆÇೀರ್ಟ್ ಭಾವಚಿತ್ರಗಳೊಂದಿಗೆ ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಅಕ್ಟೋಬರ್ 30 ರೊಳಗೆ ಸಲ್ಲಿಸುವುದು.

() ಅರ್ಜಿ ಪ್ರತಿ ಸಂಖ್ಯೆ 1 ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ನಂ.58, ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಭವನ, ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು560 025. ಮತ್ತು () ಅರ್ಜಿ ಪ್ರತಿ ಸಂಖ್ಯೆ 2 ಕಾರ್ಯದರ್ಶಿ, ಕೇಂದ್ರ ಸೈನಿಕ ಮಂಡಳಿ, ವೆಸ್ಟ್ ಬ್ಲಾಕ್ – VI  ಆರ್ ಕೆ ಪುರಂ, ನವದೆಹಲಿ – 110066. ಇಲ್ಲಿಗೆ ಸಲ್ಲಿಸುವುದು. ಖುದ್ದು ಕಛೇರಿಗೆ ಬಂದು ಕೊಡುವ ಅರ್ಜಿಯನ್ನು ಸ್ವೀಕರಿಸುವುದಿಲ್ಲ.

ಅರ್ಜಿ ನಮೂನೆಗಳ ಸಾಪ್ಟ್ ಕಾಫಿಗಳನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ : [email protected]  ಕಾರ್ಯದರ್ಶಿ, ಕೇಂದ್ರ ಸೈನಿಕ ಮಂಡಳಿ [email protected] ಇಲ್ಲಿ ಪಡೆಯಬಹುದು
ನಿರ್ದೇಶಕರ ಹುದ್ದೆಗೆ ಅರ್ಜಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕರ್ನಾಟಕಎಂದು ಮೊಹರು ಮಾಡಿದ ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";