ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಳ್ಳು, ವಂಚನೆ, ನಂಬಿಕೆ ದ್ರೋಹ ಇವುಗಳನ್ನು ಮೆಟ್ಟಿನಿಲ್ಲುವ ಯುವ ನಾಯಕತ್ವ ರಾಜಕಾರಣದಲ್ಲಿ ಬೆಳೆಯಬೇಕಿದೆ. ಈ ವಿಚಾರದ ಪ್ರಸ್ತಾವನೆ ಮಹತ್ವದಾಗಿದೆ.
ಪ್ರಜಾನೀತಿ ರಾಜಕಾರಣದಲ್ಲಿ ಯುವ ಜನತೆಯ ಭಾಗವಹಿಸುವಿಕೆ ತುಂಬಾ ಕಡಿಮೆ ಎಂದು ವಿಶ್ಲೇಷಣೆಯ ಅಂಕಿ ಅಂಶಗಳು ತಿಳಿಸುತ್ತವೆ. ದೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಿರುವ ಜನತೆಯ ವಯಸ್ಸು ಸರಾಸರಿ 50 ವರ್ಷಗಳ ಆಸುಪಾಸಿನಲ್ಲಿದೆ ಎಂದು ಸಮೀಕ್ಷೆ ಮಾಹಿತಿಯಿಂದ ತಿಳಿದಿದೆ.
ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಠವಾಗಿರುವ ನಮ್ಮ ದೇಶದ ಪ್ರಜಾಪ್ರಭುತ್ವ. ದೇಶದ ಪ್ರಜಾಪ್ರಭುತ್ವಕ್ಕೆ ಮತದಾನ ಮಾಡಲು 18 ವರ್ಷಗಳು ಇದ್ದರೆ ಸಾಕು, ಈ ಕಾರಣಕ್ಕಾಗಿಯೇ ಚುನಾವಣೆಯ ನೀತಿಯಲ್ಲಿ ಯುವಕರಿಗೆ ಮಹತ್ವದ ಸ್ಥಾನಮಾನವಿದೆ.
ಯುವ ಜನತೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನದಾಗಿ ತೊಡಗಿಕೊಳ್ಳಲು ಮುಖ್ಯ ಕಾರಣ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜ್ಞಾನದ ಪರಿಕಲ್ಪನೆ. ದೇಶಕ್ಕೆ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಚುನಾವಣೆಯ ಮತದಾನದ ಹಕ್ಕನ್ನು 21 ವರ್ಷದಿಂದ 18 ವರ್ಷಗಳಿಗೆ ಇಳಿಸಿದರು. ಇದರೊಂದಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಯುವ ಜನತೆಗೆ ಹೆಚ್ಚಿನದಾಗಿ ಪ್ರಾತಿನಿಧ್ಯ ನೀಡಿದರು.
ಆ ಕಾರಣಕ್ಕೆ ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲು ಕಾರಣವಾಯಿತು. ಹಾಗೂ ಯುವಕರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡರು. ಈ ವಿಚಾರವು ನನ್ನ ಚಿಕ್ಕವಯಸ್ಸಿನಲ್ಲಿಯೇ ನನ್ನ ಗಮನಕ್ಕೂ ಬಂದಿತ್ತು.
ದೇಶದ ಈಗಿನ ರಾಜಕಾರಣದಲ್ಲಿ ಯುವಶಕ್ತಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಬಹಳಷ್ಟಿದೆ. ಯುವಜನತೆ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಬಗ್ಗೆ ಟಿವಿ ಸುದ್ದಿವಾಹಿನಿಯಲ್ಲಿ ರಾಜಕೀಯ ಪಂಡಿತರ ವಿಮರ್ಶೆಯನ್ನು ನಾನು ಇತ್ತಿಚಿನ ದಿನಗಳಲ್ಲಿ ಗಮನಿಸಿದೆ. ರಾಜಕಾರಣದಲ್ಲಿ ವಿದ್ಯಾವಂತ ಯುವಕರ ಕೊರತೆ ಕಂಡು ಬರುತ್ತಿದೆ ಎಂಬ ಚರ್ಚೆಗಳ ಆಧಾರದ ಕುರಿತಾಗಿಯೇ ನನ್ನ ತಿಳುವಳಿಕೆಯ ಅನುಗುಣವಾಗಿ ಈ ಕಿರು ವಿಚಾರವನ್ನು ಪ್ರಸ್ಥಾಪಿಸುತ್ತಿರುವೆ.
ಆಡಳಿತ ವ್ಯವಸ್ಥೆಯಲ್ಲಿ ಕಂಡುಬರುತ್ತಿರುವ ಭ್ರಷ್ಟಾಚಾರ ಹಾಗೂ ಜಾತಿ ರಾಜಕೀಯದ ಮಹತ್ವಗಳು ರಾಜಕೀಯ ಕ್ಷೇತ್ರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ, ರಾಜಕಾರಣದ ಸ್ಥಾನಮಾನದಲ್ಲಿರುವ ಕುಟುಂಬದವರೇ ರಾಜಕೀಯ ಕ್ಷೇತ್ರಕ್ಕೆ ಮೀಸಲಾಗುತಿದ್ದಾರೆ. ಈ ವ್ಯವಸ್ಥೆಯನ್ನು ಕಂಡು ಸಾಮಾನ್ಯ ಯುವಕರಿಗೆ ರಾಜಕೀಯ ವಿಚಾರದ ಜಿಜ್ಞಾಸೆ ಮೂಡಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರವು ಜನರ ಬದುಕಿಗೆ ಅನಿವಾರ್ಯವಾಗಿತ್ತು. ಆ ಕಾಲಮಾನದಲ್ಲಿ ಯುವ ಜನರ ಸಂಘಟನೆಗಳ ಹೋರಾಟ ಪ್ರಬಲವಾಗಿತ್ತು. ಆ ಕಾರಣಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ನಂತರ ಕಾಲಗಟ್ಟದಲ್ಲಿ ದೇಶದ ಯುವಜನತೆ ವಿದ್ಯಾವಂತರಾದರು. ಯುವಕರು ಜೀವನ ಶೈಲಿಗೆ ಹೆಚ್ಚಿನ ಹಣ ಸಂಪಾದಿಸಲು ಮಹತ್ವ ಕೊಡುತ್ತಿದ್ದಾರೆ. ಆ ಕಾರಣಕ್ಕೆ ಸಂಘಟನೆಗಳಿಂದ ನ್ಯಾಯದ ಮುನ್ನುಡಿ ಹೋರಾಟಗಳು ಕಣ್ಮರೆಯಾಗುತ್ತಿವೆ.
ರಾಜಕಾರಣದಲ್ಲಿ ಸುಳ್ಳು ಆಶ್ವಾಸನೆ, ಮೋಸ, ನಂಬಿಕೆ ದ್ರೋಹ ಹೆಚ್ಚಾಗುತ್ತಿದೆ ಇದರೊಂದಿಗೆ ರಾಜಕಾರಣದಲ್ಲಿ ಇನ್ನೊಬ್ಬರ ಬೆಳವಣಿಗೆಯನ್ನು ಕಂಡು ಸಂಕಟ ಪಡುವ ಕೆಟ್ಟ ಜನರ ಮನಸ್ಥಿತಿಗೆ ಬೇಸತ್ತು ಉತ್ತಮ ಮನಸ್ಥಿತಿಯ ಬುದ್ದಿವಂತಿಕೆಯ ಯುವಕರು ಸಹಜವಾಗಿ ರಾಜಕೀಯದಿಂದ ದೂರವಾಗುತ್ತಿದ್ದಾರೆ.
ರಾಜಕಾರಣದ ಬಗ್ಗೆ ಆಸಕ್ತಿ ಇರುವಂತಹ ಪ್ರತಿಭಾವಂತ ಯುವಕರಿಗೆ ರಾಜಕೀಯ ಕ್ಷೇತ್ರದ ಸಮಾಜಸೇವೆಯ ಬಗ್ಗೆ ಜ್ಞಾನದ ಅರಿವನ್ನು ಮೂಡಿಸಬೇಕಿದೆ. ಇದರೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿ ಸಿಗುವಂತಹ ಗೌರವಗಳ ಬಗ್ಗೆ ಯುವ ನಾಯಕತ್ವಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಯುವಕರು ಭಾಗವಹಿಸಲು ಬೆಂಬಲಿಸಬೇಕಿದೆ. ರಾಜಕಾರಣದಲ್ಲಿ ಹಿರಿಯರ ಪಾತ್ರವೇ ಬಹುಮುಖ್ಯವಾಗಿ ಕಂಡುಬರುತ್ತಿದೆ. ಆ ಒಂದು ಸಿದ್ಧ ವ್ಯವಸ್ಥೆಯನ್ನು ಮೀರಿಸುವ ಕಿಚ್ಚು ಯುವಕರಲ್ಲಿ ಮೂಡಿಸಬೇಕಿದೆ.
ಸುಳ್ಳು ಸತ್ಯವಾಗದು. ಸತ್ಯ ಸುಳ್ಳಾಗದು. ಮಾಡಿದ ಪಾಪಗಳು ತಲೆ ಮೇಲೆ ಸುತ್ತುತ್ತಿರುತ್ತವೆ. ನಂಬಿಕೆ ದ್ರೋಹಕ್ಕೆ ಬೆಲೆ ಕಟ್ಟಲೆಬೇಕು ಇದಕ್ಕೆ ಸಾಕ್ಷಿ ಗುಡ್ಡೆಗಳು ಮನುಷ್ಯರ ಪಾಪ ಪ್ರಜ್ಞೆಯಲ್ಲಿ ಕಂಡು ಬರುತ್ತವೆ. ಮನುಷ್ಯತ್ವ ಉಳಿಸಿಕೊಂಡ ವ್ಯಕ್ತಿಯ ಆದರ್ಶಗಳು ಸದಾ ಜೀವಂತ.
ಸಾಮಾಜಿಕವಾಗಿ ಉತ್ತಮ ವ್ಯಕ್ತಿತ್ವವನ್ನು ಬೆಂಬಲಿಸಿದರೆ ನಮ್ಮ ವ್ಯಕ್ತಿತ್ವವನ್ನು ನಾವು ಬೆಂಬಲಿಸಿಕೊಂಡತ್ತೆ, ಒಂದಾಗಿ ಉತ್ತಮ ಸಮಾಜ ಕಟ್ಟೋಣ ಇದುವೇ ಜೀವನದ ಸಾಕ್ಷಾತ್ಕಾರ.
ಲೇಖನ-ರಘು ಗೌಡ ಕೆ.ಟಿ.ಹಳ್ಳಿ.