ಕೃಷಿ ಡಿಪ್ಲೋಮಾ ಕೋರ್ಸ್ : ಅರ್ಜಿ ಸಲ್ಲಿಕೆ ಸೆ. 30 ರವರೆಗೆ ವಿಸ್ತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕೋರ್ಸ್ಗೆ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, 2 ವರ್ಷಗಳ ಅವಧಿಯ  ಕೋರ್ಸ್ ದಾಖಲಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸೆ. 30 ರವರೆಗೆ ವಿಸ್ತರಿಸಲಾಗಿದೆ.

      ಮೊದಲು ಅರ್ಜಿ ಸಲ್ಲಿಕೆಗೆ ಸೆ. 14 ಕೊನೆಯ ದಿನಾಂಕವಾಗಿತ್ತು.  ಇದೀಗ ಅರ್ಜಿ ಸಲ್ಲಿಕೆ   ಅವಧಿಯನ್ನು ಸೆ. 30 ರವರೆಗೆ ವಿಸ್ತರಿಸಲಾಗಿದ್ದು, ಅರ್ಜಿಯನ್ನು  www.uahs.edu.in ವೆಬ್ಸೈಟ್ ನಲ್ಲಿ ಅಧಿಸೂಚನೆಗಳು ಶೀರ್ಷಿಕೆಯಡಿ ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬೇಕು.

     ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನಿಷ್ಟ ಶೇ. 45 ಅಂಕಗಳೊಂದಿಗೆ ತೇರ್ಗಡೆಯಾಗಿರಬೆಕು.  (.ಜಾತಿ, .ಪಂಗಡ ಮತ್ತು ಪ್ರವರ್ಗ1 ಅಭ್ಯರ್ಥಿಗಳು ಕನಿಷ್ಟ ಶೇ. 40).  ವಯಸ್ಸು 19 ವರ್ಷ ಮೀರಿರಬಾರದು.  ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ ಇರುತ್ತದೆ.  

ಎರಡು ವರ್ಷದ ಡಿಪ್ಲೋಮಾ ಕೋರ್ಸ್ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಹೈನು ವಿಜ್ಞಾನ, ರೇಷ್ಮೆ ಕೃಷಿ, ಜೇನು ಕೃಷಿ ಹೀಗೆ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನುರಿತ ವಿಜ್ಞಾನಿಗಳಿಂದ ಬೋಧನೆ ಇರುತ್ತದೆ.  ಹಾಗೂ ಕೃಷಿ ರಂಗದ ಪ್ರಾಯೋಗಿಕ ಪರಿಚಯ, ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗುವುದು.  

ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಉಡುಪಿ ಜಿಲ್ಲೆ, ಮೊಬೈಲ್ ಸಂ. 9108241342 ಅಥವಾ 9686405090, ಇಮೇಲ್ [email protected]  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement -  - Advertisement -  - Advertisement - 
Share This Article
error: Content is protected !!
";