Ad imageAd image

ನೇಪಾಳ ರಾಷ್ಟ್ರೀಯ ದಿನಾಚರಣೆ : ಕೇಂದ್ರ ಸಚಿವ ವಿ. ಸೋಮಣ್ಣ ಭಾಗಿ

News Desk


ಚಂದ್ರವಳ್ಳಿ ನ್ಯೂಸ್, ತುಮಕೂರು:

 ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ದೆಹಲಿಯಲ್ಲಿ ನಡೆದ ನೇಪಾಳದ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಭಾಗಿಯಾಗಿ ನೇಪಾಳದ ಜನತೆಗೆ ರಾಷ್ಟ್ರೀಯ ದಿನದ ಶುಭ ಕೋರಿದರು.

ನಂತರ ಮಾತನಾಡಿ ಅವರು, ಭಾರತ-ನೇಪಾಳದ ನಡುವೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಸಂಬಂಧಗಳಿದ್ದು, ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ, ಡಿಜಿಟಲ್ ಹಾಗೂ ಆರ್ಥಿಕ ಸಂಪರ್ಕ, ಜಲವಿದ್ಯುತ್, ರೈಲ್ವೆ-ರಸ್ತೆ ಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಭಾರತವು ನೇಪಾಳದೊಂದಿಗಿನ ಸಂಬಂಧ-ಸಂಪರ್ಕ ಇನ್ನಷ್ಟು ಹತ್ತಿರವಾಗಿಸಲು ಉತ್ಸುಕವಾಗಿದೆ ಎಂದರು.

        ನೇಪಾಳದ ರಾಯಭಾರಿ ಡಾ. ಸುರೇಂದ್ರ ಥಾಪಾ ಅವರು ಸೋಮಣ್ಣರವರನ್ನು ಸ್ವಾಗತಿಸಿ ಭಾರತ – ನೇಪಾಳದ ನಿಕಟ ಸಂಬಂಧವನ್ನು ಶ್ಲಾಘಿಸಿದರು.

- Advertisement -  - Advertisement - 
Share This Article
error: Content is protected !!
";