ಸೆ.23ರಂದು ಕೂತುಹಲ ಕೆರಳಿಸಿರುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆ ಅಧ್ಯಕ್ಷರಾಗಿದ್ದ ಸುಧಾ ಲಕ್ಷ್ಮೀನಾರಾಯಣ ಹಾಗೂ ಉಪಾಧ್ಯಕ್ಷರಾಗಿದ್ದ ಫರ್ಹನ್ ತಾಜ್ ರವರಿಂದ ತೆರವಾದ ಸ್ಥಾನಗಳಿಗೆ ಸೆ.
23ರಂದು ಎರಡನೇ ಅವಧಿಯ ಚುನಾವಣೆ ನಡೆಯಲಿದೆ.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿದ್ದು ಈಗಾಗಲೇ ಆಕಾಂಕ್ಷಿಗಳು ಸ್ಪರ್ದಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.

     ನಗರಸಭೆಯಲ್ಲಿ ಒಟ್ಟು, 31ಸದಸ್ಯರಿದ್ದು, ಅದರಲ್ಲಿ ಬಿ. ಜೆ. ಪಿ. 12,ಕಾಂಗ್ರೆಸ್ 9,ದಳ 7ಸದಸ್ಯರಿದ್ದರೆ, ಮೂವರು ಪಕ್ಷೇತರರಿದ್ದಾರೆ. ಜೊತೆಗೆ ಶಾಸಕಹಾಗೂ ಸಂಸದರ ಮತಗಳು ಸೇರಿದರೆ ಸ್ಪಷ್ಟ ಬಹುಮತಕ್ಕೆ 17ಮತಗಳ ಅವಶ್ಯಕತೆ ಇದೆ. ಹೀಗಾಗಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ.

ಕಳೆದಬಾರಿ ಬಿಜೆಪಿ ಹಾಗೂ ಜೆ. ಡಿ. ಎಸ್. ಪಕ್ಷಗಳು ಮೈತ್ರಿ ಮಾಡಿಕೊಂಡು ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ದಳ ಪಡೆದು ನಗರಸಭೆಯ ಅಧಿಕಾರ ಚುಕ್ಕಾಣಿ ಹಿಡಿದಿದ್ದವು. ಈ ಬಾರಿಯೂ ಸಹ ಮೈತ್ರಿ ಮುಂದುವರೆಯುವ ಲಕ್ಷಣಗಳು ಸ್ಪಷ್ಟವಾಗಿವೆ. ಹೀಗಾಗಿ ಮೈತ್ರಿ ಪಕ್ಷಗಳು ಅಧಿಕಾರ ಹಿಡಿಯುವ ಉಮೇದಿನಲ್ಲಿವೆ. ಕಳೆದ ಬಾರಿಯ ಮೈತ್ರಿ ಒಪ್ಪಂದದಂತೆ ಈ ಬಾರಿ ದಳಕ್ಕೆ ಅಧ್ಯಕ್ಷ ಸ್ಥಾನ ಬೇಕೆಂದು ಒತ್ತಡಗಳಿವೆ.

ಈಗಾಗಲೇ ದಳ ಪ್ರಭಾ ನಾಗರಾಜ್ ರವರು ಆಕಾಂಕ್ಷೆಯಾಗಿದ್ದಾರೆ. ಆದರೆ ದಳಕ್ಕೆ ಅಧ್ಯಕ್ಷ ಸ್ಥಾನ ಸಿಗುವ ಸಂಭವ ಕಡಿಮೆ ಎನ್ನಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿಗೆ ವತ್ಸಲಾ, ನಾಗರತ್ನ ಕೃಷ್ಣಮೂರ್ತಿ, ಸುಮಿತ್ರಾ ಆನಂದ್ಹಾಗೂ ಹಂಸಪ್ರಿಯಾ ದೇವರಾಜ್ ರವರು ಸೇರಿದ್ದಾರೆ.

ಇವುಗಳಲ್ಲಿ ಪ್ರಮುಖವಾಗಿ ವಾತ್ಸಲಾರವರ ಹೆಸರು ಮಂಚೂಣಿಯಲ್ಲಿದೆ. ಏನೇ ಆದರೂ ಶಾಸಕ ಧೀರಜ್ ಮುನಿರಾಜು ರವರ ಅಪೇಕ್ಷೆಯ ಮೇರೆಗೆ ಎಲ್ಲವೂ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ಕಾಂಗ್ರೆನಿಂದ ನಾಗವೇಣಿ ಶ್ರೀನಿವಾಸ್, ರಜನಿ ಸುಬ್ರಮಣಿ, ರೂಪಿಣಿ ಮಂಜುನಾಥ್ ರವರು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಇದರ ಮದ್ಯೆ ಪಕ್ಷೇತರ ಸದಸ್ಯೆ ಇಂದ್ರಾಣಿ ರವರು ಸಹ ಅವಕಾಶ ಸಿಕ್ಕರೆ ಸ್ಪರ್ದಿಸುವ ಇರಾದೆ ಯಲ್ಲಿದ್ದಾರೆ. 

       ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ಕಾಂಗ್ರೆಸನಿಂದ ಆನಂದ್, ದಳದಿಂದ ವಡ್ಡರಹಳ್ಳಿ ರವಿ, ಮಲ್ಲೇಶ್ ರವರ ಹೆಸರು ಮಂಚೂಣಿಯಲ್ಲಿದೆ. ಈ ಮದ್ಯೆ ಕಾಂಗ್ರೆನಿಂದ ದೂರ ಉಳಿದ ಎಂ. ಜಿ. ಶ್ರೀನಿವಾಸ್, ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಶಿವಶಂಕರ್, ಶಿವಣ್ಣ, ಹಾಗೂ ಪಕ್ಷೇತರರಾದ ಇಂದ್ರಾಣಿ, ಮುನಿರಾಜು, ಸುರೇಶ ರವರ ನಡೆ ಸ್ಪಷ್ಟವಾಗಿಲ್ಲ.

 

- Advertisement -  - Advertisement -  - Advertisement - 
Share This Article
error: Content is protected !!
";