ಬೃಹತ್ ಶೋಭಾಯಾತ್ರೆಯೊಂದಿಗೆ ಹಿರಿಯೂರು ಹಿಂದೂ ಮಹಾಗಣಪತಿ ವಿಸರ್ಜನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :  

ನಗರದ ಜೈನ್ ಟೆಂಪಲ್ ರಸ್ತೆ ಶಂಕರ ಮಠದ ಪಕ್ಕ ಭವ್ಯ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯನ್ನು  ಭಾನುವಾರ ಬೃಹತ್ ಶೋಭಾಯಾತ್ರೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಹುಳಿಯಾರು ರಸ್ತೆ, ಚರ್ಚ್ ರಸ್ತೆ, ಆಸ್ಪತ್ರೆ ವೃತ್ತ, ಬಸ್ ನಿಲ್ದಾಣ, ರಂಜಿತ್ ಹೋಟೆಲ್ ಮೂಲಕ ಸಾಗಿ ನೆಹರು ವೃತ್ತ, ಗಾಂಧಿ ವೃತ್ತದ ಮೂಲಕ ಉದಯ ಹೋಟೆಲ್ ಬಳಿ ಇರುವ ತೋಟದ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು. 

ಬೃಹತ್ ಶೋಭಾಯಾತ್ರೆಯಲ್ಲಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ  ಹೆಚ್.ಎಸ್.ಅಮರನಾಥ್, ಪದಾಧಿಕಾರಿಗಳು ನೂರಾರು ಜನ ಕಾರ್ಯಕರ್ತರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಭಾಗವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಮತ್ತು ಸಾಂಕೀಕ ಖಾತೆ ಸಚಿವ ಡಿ ಸುಧಾಕರ್ ಪಾಲ್ಗೊಂಡು ಗಣಪತಿಗೆ ಪೂಜೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಡಿಜೆ ಸೌಂಡ್ ಸಿಸ್ಟಂ ವ್ಯವಸ್ಥೆ ಮಾಡಲಾಗಿದ್ದು ಗೀತೆಗಳಿಗೆ ನೂರಾರು ಜನ ಯುವಕರು ವಿವಿಧ ವೇಷಧಾರಿಗಳು ಕುಣಿದು ಕುಪ್ಪಳಿಸಿದರು. ಹಿಂದೂ ಮಹಾ ಗಣಪತಿಗೆ ದಾರಿ ಯುದ್ದಕ್ಕೂ ಪೂಜೆ ನಡೆಯಿತು.

ಸುಮಾರು 15 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಸಂಜೆ ಗಣಪತಿ ಪೂಜೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಮನೋರಂಜನಾ  ಕಾರ್ಯಕ್ರಮಗಳು ನಡೆದವು.

 

 

- Advertisement -  - Advertisement - 
Share This Article
error: Content is protected !!
";