ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಶ್ರೀರಾಮನಗರದ ಡಾ. ಕುಂಬಿನರಸಯ್ಯ ಎಸ್ ಅವರು ಬೆಂಗಳೂರು ವಿಶ್ವವಿದ್ಯಾಲಯದ, ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ 2024 ರ ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ಅವರು ತಮ್ಮ ವಾರ್ಷಿಕ ಸಂಶೋಧನೆಗಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಸಂಶೋಧನೆಯನ್ನು ವರ್ಗೀಕರಿಸಿದ ವಿಶಾಲ ಉಪಕ್ಷೇತ್ರಗಳೆಂದರೆ ವೇವ್ಲೆಟ್ ಅನಾಲಿಸಿಸ್, ನ್ಯೂಮರಿಕಲ್ ಮೆಥಡ್ಸ್ ಮತ್ತು ಫ್ಲೂಯಿಡ್ ಮೆಕ್ಯಾನಿಕ್ಸ್.
ಪ್ರೊಫೆಸರ್ ಕುಂಬಿನರಸಯ್ಯ ಎಸ್ ವಿವಿಧ ಗಣಿತದ ಮಾದರಿಗಳಲ್ಲಿ ತರಂಗಗಳ ಅನ್ವಯಗಳ ಸಂಶೋಧನೆಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಇವರು 105 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳ ಪ್ರಕಟಣೆಯ ಇತಿಹಾಸವನ್ನು ಹೊಂದಿದ್ದಾರೆ. 1279 ಉಲ್ಲೇಖಗಳು, h-ಸೂಚ್ಯಂಕ 22 ಮತ್ತು i10-ಸೂಚ್ಯಂಕ 40 ,ಮೂರು ರಾಷ್ಟ್ರೀಯ ಅನುದಾನಿತ ಯೋಜನೆಗಳನ್ನು ರೂಪಿಸಿದ್ದಾರೆ.
ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟ ಈ ಯುವ ವಿಜ್ಞಾನಿ ಕುಂಬಿನರಸಯ್ಯ ನವರಿಗೆ ದಾವಣಗೆರೆ ಪಬ್ಲಿಕ್ ವಾಯ್ಸ್ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿಶ್ವಬ ಮಟ್ಟದಲ್ಲಿ ಗುರುತಿಸಲ್ಪಟ್ಟ ಈ ಯುವ ವಿಜ್ಞಾನಿ ವಾಲ್ಮೀಕಿ ನಾಯಕ ಸಮುದಾಯದಕ್ಕೆ ಸೇರಿದವರು ಎನ್ನುವುದೇ ಹೆಮ್ಮೆ ಪಡುವಂತಾಗಿದೆ.