ಭದ್ರಾ ನಾಲೆಯಲ್ಲಿ 17 ವರ್ಷದ ಯುವತಿ ಶವ ಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ಇತ್ತೀಚೆಗೆ ನಾಪತ್ತೆಯಾಗಿದ್ದ ಭದ್ರಾವತಿಯ ಶಿವರಾಮನಗರದ ನಿವಾಸಿ ಅಪ್ರಾಪ್ತ ವಯಸ್ಸಿನ ಯುವತಿಯ ಶವ
, ಬಿದರೆ ಸಮೀಪದ ಭದ್ರಾ ನಾಲೆಯಲ್ಲಿ ಸೆ. 21 ರಂದು ಪತ್ತೆಯಾಗಿದೆ.  

 ಬೆಟ್ಟಸ್ವಾಮಿ ಎಂಬುವರ ಪುತ್ರಿ 17 ವರ್ಷದ ರಂಜಿತಾ ಕಾಣೆಯಾಗಿದ್ದ ಯುವತಿ. ಸೆಪ್ಟೆಂಬರ್ 19 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಫ್ಯಾಕ್ಟರಿ ಕೆಲಸಕ್ಕೆಂದು ರಂಜಿತಾ ತೆರಳಿದ್ದರು.

 ಆದರೆ ಅವರು ಕೆಲಸಕ್ಕೆ ತೆರಳಿರಲಿಲ್ಲ. ಈ ನಡುವೆ ಲಕ್ಷ್ಮೀಪುರದ ರೈಲ್ವೆ ಬ್ರಿಡ್ಜ್ ನ ಹಳಿ ಸಮೀಪ ರಂಜಿತಾರವರ ಚಪ್ಪಲಿ, ಬ್ಯಾಗ್, ಐಡಿ ಕಾರ್ಡ್ ಗಳು ಪತ್ತೆಯಾಗಿದ್ದವು. ಎಲ್ಲಿಯೂ ಅವರ ಸುಳಿವು ಲಭ್ಯವಾಗಿರಲಿಲ್ಲ.

 

 

- Advertisement -  - Advertisement - 
Share This Article
error: Content is protected !!
";