ತುಮಕೂರು ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನೋಟ ಮುನ್ನೋಟ-ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು :  

2024ರ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವನ್ನು ತಿಳಿಯಲು ಸತ್ಯ ಸಂಶೋಧನೆಯ  ಸಮಿತಿಯ ಅಡಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಮಿತಿಯ ವರಿಷ್ಠರು ತುಮಕೂರು ಜಿಲ್ಲೆಯ ಕೆಲವು ಆಯ್ದ ಭಾಗಗಳಲ್ಲಿ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಹಾಗೂ ಮತದಾರರ ಮನಸು ಅರಿಯುವ ಪ್ರಯತ್ನ ಮಾಡಲು ತುಮಕೂರು ಪ್ರವಾಸ ಮಾಡುತ್ತಿದ್ದಾರೆ ಈ ವಿಚಾರದ ಸುದ್ದಿ ಜಿಲ್ಲೆಯಾದ್ಯಂತ ಸುದ್ದಿಯಾಗಿದೆ.

ಪಾವಗಡ ತಾಲ್ಲೂಕಿನ ಮತದಾರಾದ ನನ್ನ ಅಭಿಪ್ರಾಯದಂತೆ ತುಮಕೂರು  ಲೋಕಸಭಾ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ಜನ ವಿರುದ್ಧ ಮತದಾನ ಮಾಡಿದ್ದಾರೆ ಎಂಬ ಸುದ್ದಿ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಸುದ್ದಿಯಾಗಿತ್ತು ಆ ವಿಚಾರವನ್ನು ಈ ಸಮಯದಲ್ಲಿ ನೆನೆಯುತ್ತೇನೆ.

ಪ್ರಸ್ತುತ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀದರ್ ಹಾಲಪ್ಪನವರು ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ನಿರಂತರವಾಗಿ ರಾಜಕೀಯ ಮಾನದಂಡದ ಕಾರ್ಯಕ್ರಮಗಳ ಮೂಲಕ ಜನರ ಸಂಪರ್ಕಕ್ಕೆ ಇದ್ದರು ಹಾಲಪ್ಪನವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಾಂಗ್ರೆಸ್ ಪಕ್ಷ ನೀಡುತ್ತದೆ ಎಂಬ ಭರವಸೆ ಹೊಂದಿದ್ದ ತುಮಕೂರು ಲೋಕಸಭಾ ವ್ಯಾಪ್ತಿಯ ಜನರಿಗೆ ದೊಡ್ಡ ಪ್ರಮಾಣದಲ್ಲಿ ನಿರಾಸೆ ಮೂಡಿದ ಕಾರಣಕ್ಕೆ ತುಮಕೂರು ಹಾಗೂ ಚಿತ್ರದುರ್ಗ ಎರಡು ಲೋಕಸಭಾ ಕ್ಷೇತ್ರದಲ್ಲಿ ಜನರ ನಿರಾಸೆ ಮೂಡಿದ ಫಲದಿಂದ ಎರಡು ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಕಳೆದುಕೊಂಡ ವಿಚಾರ ವಿಪರ್ಯಾಸ-ಕಿರು ಲೇಖನ-ರಘು ಗೌಡ

 

- Advertisement -  - Advertisement - 
Share This Article
error: Content is protected !!
";