Ad imageAd image

ಅತಿಥಿ ಉಪನ್ಯಾಸಕರ ಹುದ್ದೆಗೆ ಭೌತಿಕ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಪದವಿ/ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಹಾಗೂ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜಿಗೆ, ಮಲ್ಲೇಶ್ವರಂರಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ಮತ್ತು ಭೌತಿಕ ಪ್ರತಿಯನ್ನು ಸಂಬಂಧಪಟ್ಟ ದಾಖಲಾತಿಗಳೊಡನೆ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 4 ರವರೆಗೆ  ವಿಸ್ತರಿಸಲಾಗಿದೆ.

 ತಾತ್ಕಾಲಿಕ ಹುದ್ದೆಗಳಾದ ಪ್ರಾಂಶುಪಾಲರು, ಸಹಾಯಕ ನಿರ್ದೇಶಕರು- ದೈಹಿಕ ಶಿಕ್ಷಣ, ಸಹಾಯಕ ಗ್ರಂಥಪಾಲಕರು, ಸಂಯೋಜಕರು-ಸ್ನಾತಕ ಪದವಿ ಕೋರ್ಸುಗಳಿಗೆ, ಉಪನಿರ್ದೇಶಕರು- ಪ್ರಸಾರಾಂಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ (ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜು ಮತ್ತು ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣ)

ಲ್ಯಾಬ್ ಅಸಿಸ್ಟೆಂಟ್ (ಕಂಪ್ಯೂಟರ್ ಸೈನ್ಸ್ ಲ್ಯಾಬ್) ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೂ ಸ್ವವಿವರಗಳೊಂದಿಗೆ ಸಂಬಂಧಪಟ್ಟ ದಾಖಲಾತಿಯ ಭೌತಿಕ ಪ್ರತಿ ಸಲ್ಲಿಸುವ ಅವಧಿಯನ್ನು ದಿನಾಂಕ: ಅಕ್ಟೋಬರ್ 4 ರವರೆಗೆ  ವಿಸ್ತರಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";