ಸಾರ್ವಜನಿಕರು ಕಟ್ಟಡದ ಮೇಲೆ ಹತ್ತದಂತೆ ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯಲ್ಲಿ ಸ್ಥಾಪನೆ ಮಾಡಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಹಾಗೂ ಶೋಭಯಾತ್ರೆಯು ಇದೇ ಸೆ.28ರಂದು ನಡೆಯಲಿದ್ದು, ಈ ಸಮಯದಲ್ಲಿ ಸಾರ್ವಜನಿಕರು ಕಟ್ಟಡದ ಮೇಲೆ ಹತ್ತದಂತೆ ಬೆಸ್ಕಾಂ ಸೂಚನೆ ನೀಡಿದೆ.

 ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯು ಚಳ್ಳಕೆರೆ ಗೇಟ್‌ನಿಂದ ಬಿ.ಡಿ.ರಸ್ತೆ, ಗಾಂಧಿ ವೃತ್ತದ ಮೂಲಕ ಹೊಳಲ್ಕೆರೆ ರಸ್ತೆಯ ಮುಖಾಂತರ ಚಂದ್ರವಳ್ಳಿ ತೋಟಕ್ಕೆ ಸಾಗಲಿರುವ ಮಾರ್ಗದಲ್ಲಿ ಹಾಗೂ ಸುತ್ತ-ಮುತ್ತ ಇರುವ ಅಂಗಡಿ ಮಳಿಗೆಗಳ ಮೇಲೆ ಸಾರ್ವಜನಿಕರು ಹತ್ತದಂತೆ ಅಂಗಡಿಗಳ ಮಾಲೀಕರು ನಿಗಾವಹಿಸಬೇಕು.

ಒಂದು ವೇಳೆ ಸಾರ್ವಜನಿಕರು ಅಂಗಡಿಗಳ ಮೇಲೆ ಹತ್ತಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದರಿಂದಾಗುವ ಆಗುಹೋಗುಗಳಿಗೆ ಅಂಗಡಿ ಮಾಲೀಕರೇ ನೇರ ಹೊಣೆಗಾರರು ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";