ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಎಂ.ಆರ್.ಎಸ್ ಸರ್ಕಲ್ ನಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ನಗರ ಕಛೇರಿಯಲ್ಲಿ ಹಾರುವ ಹಾವು ಪತ್ತೆಯಾಗಿದ್ದು ಇದು ಉರಗ ಜಾತಿಯಲ್ಲಿ ವಿಶೇಷ ಮತ್ತು ಆಕರ್ಷಣೀಯ ವಾದದ್ದು ಈ ಹಾವಿಗೆ ಅಲಂಕೃತ ಹಾರುವ ಎಂದು ಹೆಸರು
ನೋಡುಗರನ್ನು ಗಮನ ಸೆಳೆಯುತ್ತದೆ. ಈ ಹಾವು ನಗರ ಕಛೇರಿ ಆವರಣದಲ್ಲಿ ಕಾಣಿಸಿಕೊಂಡಿದ್ದು ,
ಕೊಡಲೆ ಉರಗ ರಕ್ಷಕ ಸ್ನೇಕ್ ವಿಕ್ಕಿ ಮತ್ತು ಉರಗ ತಜ್ಞ ಜಯಂತ ಬಾಬು ರವರಿಗೆ ಸಂಪರ್ಕಿಸಿದ್ದು ಕೊಡಲೆ ಸ್ಥಳಕ್ಕೆ ಆಗಮಿಸಿದ ಇವರು ಈ
ಸುಂದರ ಹಾವಿನ ಬಗ್ಗೆ ಇಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಸಂರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿದರು.