Ad imageAd image

ಉಪಟಳ ನೀಡುತ್ತಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಕಳೆದ ಆರು ತಿಂಗಳಿಂದ ಹುಲುಕುಡ್ಡಿ ಬೆಟ್ಟದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆಯನ್ನ ಸೆರೆ ಹಿಡಿಯಲು ಇಡಲಾಗಿದ್ದ ಅರಣ್ಯ ಇಲಾಖೆಗೆ ಬೋನಿಗೆ ಹೆಣ್ಣು ಚಿರತೆ ಬಿದ್ದಿದೆ. 

 ದೊಡ್ಡಬಳ್ಳಾಪುರ ತಾಲ್ಲೂಕಿನ ಗಡಿಭಾಗಳಾದ ಗೌರಿಬಿದನೂರು ಚಿಕ್ಕಬಳ್ಳಾಪುರ  ಕೊರಟಗೆರೆ ಬಾಗದ ಅರಣ್ಯದಿಂದ  ವಲಸೆ ಬರುವ ಚಿರತೆಗಳು ಬೆಟ್ಟಗಳ ಪೊದೆ ಪೂಟರೆಗಳಲ್ಲಿ ಮರಿ ಹಾಕಿ ಅವುಗಳ ಪೋಷಣೆಗಾಗಿ ಕಾಡಿನಲ್ಲಿ ಆಹಾರ ಸಿಗದಿದ್ದಾಗ ಊರುಗಳಿಗೆ ಲಗ್ಗೆ ಇಟ್ಟು  ಸಾಕು ಪ್ರಾಣಿ ಬೇಟೆಯಾಡಿ  ಮರಿಗಳಿಗೆ ಅಹಾರ ನೀಡಿ ಅವುಗಳು ದೊಡ್ಡದಾದ  ಮೇಲೆ   ಬೆಟ್ಟ ಗುಡ್ಡ ಪೊದೆಗಳಲ್ಲಿ ನೆಲಸಿ ಬೇಟೆಗಾಗಿ ಊರುಗಳಿಗೆ  ಲಗ್ಗೆ ಇಡು ಹಾಕುತಾವೆ

  ಬೆಟ್ಟ ಸಾಲಿನ ಪ್ರದೇಶವಾದ  ಹುಲಿಕುಡಿ ಬೆಟ್ಟದ ಅಂಟಿಕೊಂಡಂತೆ ಇರುವ  ಮಾಡೇಶ್ವರ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಬೆಟ್ಟದಲ್ಲಿ ನಾಲ್ಕೈದು ಚಿರತೆಗಳು ವಾಸವಾಗಿದ್ದು, ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಾಗ  ಕಾಣಿಸಿಕೊಳ್ಳುತ್ತಿದ್ದವು, ತೋಟದಲ್ಲಿ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಗಳಲ್ಲಿ ಚಿರತೆಗಳ ಚಲನವಲನ ಸೆರೆಯಾಗಿತ್ತು. 

 ಚಿರತೆಗಳ ಚಲನವಲನ ದಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು, ಗ್ರಾಮಸ್ಥರ ಮನವಿ ಮೇರೆಗೆ ನಿನ್ನೆ ಸಂಜೆ 6 : 30 ರ ಸಮಯದಲ್ಲಿ ಗ್ರಾಮದ ಹೊರಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟಿದ್ದ, ಕೇವಲ ಎರಡೇ ತಾಸಿನಲ್ಲಿ 18 ತಿಂಗಳ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. 

 ಅದರೆ ಒಂದು ಚಿರತೆ ಬೋನಿಗೆ ಬಿದ್ದ ಎಂದು ಗ್ರಾಮಸ್ಥರು ನಿರಳರಾಗಿದ್ದರು  ಬೆಟ್ಟದಲ್ಲಿ ಇನ್ನೂ ನಾಲ್ಕೈದು ಚಿರತೆ ಗಳಿದ್ದು ಗ್ರಾಮಸ್ಥ ಯಾವುದೇ ಕಾರಣಕ್ಕೂ ಮೈ ಮರೆಯುವಂತಿಲ್ಲ  ಪ್ರತಿ ದಿನ ಪ್ರತಿ ಕ್ಷಣ   ಎಚ್ಚರದಿಂದಿರಬೇಕು. ಸೆರೆ ಹಿಡಿದ ಚಿರತೆಯನ್ನ ದೊಡ್ಡಬಳ್ಳಾಪುರ ಅರಣ್ಯ ಇಲಾಖೆ   ಸುರಕ್ಷಿತವಾಗಿ  ಸ್ಥಳಕ್ಕೆ ಸ್ಥಳಾಂತರಿಸಿರುವುದ್ದಾಗಿ ಹೇಳಿದ್ದಾರೆ.

 

- Advertisement -  - Advertisement - 
Share This Article
error: Content is protected !!
";