ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಿಸ್ತು, ಸಮಯಪ್ರಜ್ಞೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ರಾಜ್ಯ ಸೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಹೇಳಿದರು.
ನಗರದ ಹೊರವಲಯದ ರೈಲ್ವೆ ಸ್ಟೇಷನ್ ಬಳಿಯಿರುವ ಆನಿಬೆಸೆಂಟ್ ಸ್ಕೌಟ್ ಅಂಡ್ ಗೈಡ್ ಕೇಂದ್ರದಲ್ಲಿ ನಡೆದ ಮೂಲ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಸೌಟ್ಸ್ ಮತ್ತು ಗೈಡ್ಸ್ನಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳುವುದರ ಜತೆಗೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಪರಿಸರ ಕಲುಷಿತವಾಗುತ್ತಿದ್ದು, ಇದನ್ನು ಉಳಿಸಿಕೊಳ್ಳಬೇಕು. ಗಿಡ ಮರಗಳನ್ನು ಬೆಳೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಸೌಟ್ಸ್ ಗೈಡ್ಸ್ ತತ್ವಗಳನ್ನು ಅಳವಡಿಸಿಕೊಂಡರೆ ಅವರ ಮುಂದಿನ ಜೀವನ ಶಿಸ್ತು ಬದ್ದವಾಗಿ, ಉತ್ತಮವಾಗಿರಲಿದೆ.
ಸೌಟ್ಸ್ ಮತ್ತು ಗೈಡ್ಸ್ ಧೈಯೋದ್ದೇಶಗಳಾದ ದೇಶ ಪ್ರೇಮ, ಪರಿಸರ ಕಾಳಜಿ, ಸರ್ವ ಧರ್ಮ ಸಮನ್ವತೆಗಳನ್ನು ಇಂದಿನ ಮಕ್ಕಳಿಗೆ ತುಂಬಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಶಿಕ್ಷಣದಲ್ಲಿ ಮುಂದಿನ ದಿನಗಳಲ್ಲಿ ಮತ್ತರವಾದ ಬದಲಾವಣೆಯಾಗುತ್ತಿದೆ ಇದನ್ನು ಅರಿತು ಶಾಲಾ ಕಾಲೇಜುಗಳಲ್ಲಿ ಸೌಟ್ಸ್ ಗೈಡ್ಸ್ ಕಡ್ಡಾಯಗೊಳಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಸೌಟ್ಸ್ ಗೈಡ್ಸ್ ವಿಶ್ವವಿದ್ಯಾಲಯ ತೆರೆಯುವ ಚಿಂತನೆ ನಡೆಸಲಾಗುವುದು.
ಹಾಗು ದೇಶದಲ್ಲಿ ವರ್ಷಕ್ಕೆ ಎರಡರಿಂದ ಮೂರು ರಷ್ಠು ಪರಿಸರ ನಾಶವಾಗುತ್ತಿದೆ ಯುವಶಕ್ತಿ ಸಾಮಾಜಿಕ ಕಾಳಜಿಯಿಂದ ಪರಿಸರದ ಗಿಡ ಮರಗಳನ್ನ ಬೆಳಸಿ ಪರಿಸರ ಬೆಳೆಸುವುದರಿಂದ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಪೂರ್ವಿಕರ ಹಾಕಿದಂತ ನೆಲೆಗಳಿಗೆ ಮರುಕಳಿಸಬಹುದು ಎಂದರು.
ಈ ವೇಳೆ ಸೌಟ್ಸ್ ಗೈಡ್ಸ್ನ ರಾಜ್ಯ ಪದಾಧಿಕಾರಿಗಳಾದ ಚೆಲ್ಲಯ್ಯ, ಅಂಜುಳ ಸೇರಿದಂತೆ ತರಬೇತುದಾರರಾದ ರೂಪಾಲಿ ರಾಥೋಡ್, ಭೀಮ್ ರಾಯಪ್ಪ ಸ್ಕೌಟ್ ಗೈಡ್ ಶಿಬಿರಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.