ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಭದ್ರಾ ಹಿನ್ನೀರಿನಲ್ಲಿ ಕಾಡಾನೆಯೊಂದರ ಅಸ್ತಿಪಂಜರ ಪತ್ತೆಯಾಗಿದೆ. ಮೀನು ಹಿಡಿಯುವವರು ಆನೆಗಳ ಮೂಳೆಗಳನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅದರ ಅನ್ವಯ ಅಧಿಕಾರಿಗಳು ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ, ಅಲ್ದಾರ ವಿಭಾಗದ ಬೈರಾಪುರ ಹಿನ್ನೀರಿನ ಪ್ರದೇಶದಲ್ಲಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಸಲಗದ ಅಸ್ತಿ ಪಂಜರ ಪತ್ತೆಯಾಗಿದ್ದು ಆನೆಯ ತಲೆಬುರುಡೆಯಲ್ಲಿ ಹಲವು ರಂದ್ರಗಳು ಕಾಣಿಸಿವೆ. ಹೀಗಾಗಿ ದಂತಕ್ಕಾಗಿ ಆನೆಯನ್ನ ಹತ್ಯೆ ಮಾಡಿರುವ ಶಂಕೆಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.