ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಹಾಲಿನ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವಡ್ಡರಹಟ್ಟಿ ಬಳಿ ಘಟನೆ ನಡೆದಿದೆ.

- Advertisement - 

ಬ್ಯಾಡನೂರು ಗ್ರಾಮದಿಂದ ಹಾಲು ತುಂಬಿಕೊಂಡು ಪಾವಗಡದ ಕಡೆ ಬರುವಾಗ ಬ್ಯಾಡನೂರು ಗುಂಡಾರ್ಲಹಳ್ಳಿ ನಡುವಿನ ರಸ್ತೆಯ ವಡ್ಡರಹಟ್ಟಿ ಬಳಿ ಟ್ಯಾಂಕರ್ ಪಲ್ಟಿ ಹೊಡೆದಿದೆ.

- Advertisement - 

ವಡ್ಡರಹಟ್ಟಿ ಸಮೀಪ ಬರುತ್ತಿದ್ದಂತೆ ರಸ್ತೆಯ ಬದಿ ಟ್ಯಾಂಕರ್‌ಪಲ್ಟಿಯಾಗಿದ್ದರಿಂದ ಭಾಗಶಃ ಹಾಲು ನೆಲದ ಪಾಲಾಗಿದೆ. ಕ್ರೇನ್ ಸಹಾಯದಿಂದ ಟ್ಯಾಂಕರ್ ಅನ್ನು ಮೇಲೆತ್ತಿದ್ದಾರೆ. ಪೋಲಾಗುತ್ತಿದ್ದ ಹಾಲನ್ನು ಬಿಂದಿಗೆ, ಕ್ಯಾನುಗಳಲ್ಲಿ ಸ್ಥಳೀಯರು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

 

- Advertisement - 

 

 

 

Share This Article
error: Content is protected !!
";