ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮುಡಾದಲ್ಲಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದ ಮೈಸೂರಿನ ಆರ್ ಟಿಐ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಸ್ನೇಹಮಯಿ ಕೃಷ್ಣ ಅವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. 2024ರ ಆಗಸ್ಟ್ 21 ರಂದು ಲಾವಣ್ಯ ನಂಜನಗೂಡು ಪೊಲೀಸರಿಗೆ ದೂರು ನೀಡಿದ್ದೂ, ಅದೇ ದಿನ ಎಫ್‌ಐಆರ್ ಕೂಡ ದಾಖಲಾಗಿದೆ.
ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಸಿದ ನಂತರ ಶನಿವಾರ ತಡರಾತ್ರಿಯಿಂದಲೇ ಈ ಸುದ್ದಿ ಹರಿದಾಡಲು ಪ್ರಾರಂಭಿಸಿತು. ಜುಲೈ 18, 2024 ರಂದು ನ್ಯಾಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕೃಷ್ಣ ಇತರ ಆರೋಪಿಗಳೊಂದಿಗೆ ತನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆ ಎಳೆದು, ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ಆರೋಪಿಸಿರುವ ಅಂಶಗಳು ಬೆಳಕಿಗೆ ಬಂದಿದ್ದು ನನ್ನ ಹಾಗೂ ನನ್ನ ತಾಯಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ.
ಅಲ್ಲದೆ 2024ರ ಜುಲೈ 28ರಂದು ಕೋರ್ಟ್ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಸ್ನೇಹಮಯಿ ಕೃಷ್ಣ ದಾಳಿ ನಡೆಸಿದ್ದಾರೆಂದೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಪ್ರಭಾ ಎ1 ಆರೋಪಿಯಾಗಿದ್ದರೆ, ಸಿದ್ದಪ್ಪ ಎಂಬವರು ಎ2 ಆರೋಪಿ. ಅತ್ತೆ, ಮಾವ ಹಾಗೂ ಅತ್ತೆಯ ಸಹೋದರನಿಗೆ ಸ್ನೇಹಮಯಿ ಕೃಷ್ಣ ಕಿರುಕುಳ ನೀಡುತ್ತಿದ್ದಾನೆ. ಸ್ನೇಹಮಯಿಕೃಷ್ಣ ಎ4 ಆರೋಪಿಯಾಗಿದ್ದು ಎ3 ಆರೋಪಿ ಡಾಬಾ ಜಯಕುಮಾರ್ ಜೊತೆ ಸೇರಿ ಹಲ್ಲೆ ಯತ್ನಿಸಿದ್ದಾರೆ. ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಹಾಗೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಗಂಡ ಹೃದಯಘಾತದಿಂದ 2020ರಲ್ಲಿ ನಿಧನ ಹೊಂದಿದ್ದರು. ಡೆತ್ ಬೆನಿಫಿಸರಿ ಹಣ ಹಾಗು ನನ್ನ ಒಡವೆ ಪಡೆಯುವ ವಿಚಾರ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಪ್ರಕರಣದ ವಿಚಾರಣೆ ಮುಗಿಸಿ ನ್ಯಾಯಾಲಯದಿಂದ ತಾಯಿ ಜೊತೆ ಮನೆಗೆ ಬರುವಾಗ ಅಟ್ಯಾಕ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಯಿ ಕೃಷ್ಣವಿರುದ್ಧ ಹಲವು ಸೆಕ್ಷನ್ ಗಳ ಲಾವಣ್ಯ ಕೇಸ್ ದಾಖಲಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ ಆ ಮಹಿಳೆ ನನ್ನ ವಿರುದ್ಧ ಮಾಡುತ್ತಿವ ಆರೋಪಗಳು ಸುಳ್ಳು. ನನ್ನ ವಿರುದ್ಧ ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಜೈಲಿಗೆ ಹೋದರೂ ಸರಿ ಹೋರಾಟ ನಿಲ್ಲಿಸುವುದಿಲ್ಲ. 2012ರಲ್ಲಿಯೂ ಇದೇ ರೀತಿ ಸುಳ್ಳು ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳಿಸಿದ್ದರು. ಆಗಲೂ ಕೂಡ ನಾನು ಜೈಲಿನಿಂದಲೇ ಹೋರಾಟ ಮಾಡಿದ್ದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಇದರ ಮಧ್ಯ ಸ್ನೇಹಮಯಿ ಕೃಷ್ಣ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು ಸೂಕ್ತ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಇಡಿಗೆ ನಾನು ಮೇಲ್ ಕಳುಹಿಸಿದ್ದೇನೆ, 5,000 ಕೋಟಿ ರೂ.ಗೂ ಹೆಚ್ಚು ಹಣ ದುರ್ಬಳಕೆಯಾಗಿದೆ. ಮುಡಾದಲ್ಲಿ ಹಂಚಿಕೆಯಾಗಿರುವ ನಿವೇಶನ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಬೆಳಕಿಗೆ ತರುವುದು ಪ್ರಮುಖ ಉದ್ದೇಶವಾಗಿದೆ.
ಪ್ರಭಾವಿಗಳಿಗೆ ದೊಡ್ಡ ಮಟ್ಟದ ಮಣೆ ಹಾಕಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ನಿರಾಕರಿಸಲಾಗಿದೆ. ಸಿಬಿಐನಿಂದ ಸಮಗ್ರ ತನಿಖೆಗೆ ಕೋರಿ ನಾನು ಈಗಾಗಲೇ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಅವರು ಮಾಹಿತಿ ನೀಡಿದರು.