Ad imageAd image

ಕನ್ನಡ ನಾಡು ನುಡಿ ಬೆಳೆಸಲು ಸಾಹಿತಿಗಳ ಕೊಡುಗೆ ಅಪಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಹಿತ್ಯವು ಎಲ್ಲ ಜಾತಿ ಧರ್ಮಗಳನ್ನು ಮೀರಿದೆ. ಸಾಹಿತ್ಯಕ್ಕೆ ಅನೇಕ ಹಿರಿಯ ಸಾಹಿತಿಗಳು ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ವಕೀಲರು ಹಾಗೂ ವೇದಿಕೆಯ ಗೌರವಾಧ್ಯಕ್ಷ ಬಿ.ಕೆ  ರಹಮತ್ ವುಲ್ಲಾ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 18ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥಾಪಕಿ ದಯಾ ಪುತ್ತುರ್ಕರ್ ಮಾತನಾಡಿ ಸಾಹಿತ್ಯ ಬದುಕಿನಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಚಿನ್ಮುಲಾದ್ರಿ ಸಿರಿ ಶಿಕ್ಷಕ ಪ್ರಶಸ್ತಿಯನ್ನು ಡಾ.ಹೆಚ್.ಎಸ್ ಶಫಿಉಲ್ಲಾ ರವರಿಗೆ ನೀಡಿ ಸನ್ಮಾನಿಸಲಾಯಿತು. ಹಾಗೂ ಈ ವರ್ಷದ ವೇದಿಕೆ ಸಾಧಕರು ಎಂಬ ಪ್ರಶಸ್ತಿಯನ್ನು ಸತ್ಯಪ್ರಭಾ ವಸಂತ್ ಕುಮಾರ್ ರವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ಎಂ ವೀರೇಶ್, ಶೋಭಾ ಮಲ್ಲಿಕಾರ್ಜುನ್, ಪ್ರಕಾಶಕ ರಾಜು.ಎಸ್ ಸೂಲೇನ ಹಳ್ಳಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಮೂರ್ತಿ.ಟಿ ಕೋಡಿಹಳ್ಳಿ, ಡಾ.ನವೀನ್ ಸಜ್ಜನ್, ಶಿವಾನಂದ್ ಬಂಡೆ ಮೆಗಳಹಳ್ಳಿ, ವಿನಾಯಕ್, ಕೆ. ಟಿ ಶಾಂತಮ್ಮ, ಕೆ.ಎಸ್ ತಿಪ್ಪಮ್ಮ, ಸತೀಶ್ ಕುಮಾರ್, ಮುದ್ದು ರಾಜ್, ಪ್ರವೀಣ್, ವೀರೇಶ್, ಶಿವರುದ್ರಪ್ಪ,

ಸಾದತ್, ಕೊರ್ಲಕುಂಟೆ ತಿಪ್ಪೇಸ್ವಾಮಿ, ಸುಮಾ ರಾಜ್ ಶೇಖರ್, ಮೀರಾ ನಾಡಿಗ್, ಜಯದೇವ್ ಮೂರ್ತಿ, ಶಾರದಾ ಜೈರಾಮ್, ತಿಪ್ಪೀರಮ್ಮ, ಉಷಾ ರಾಣಿ, ರಾಜೇಶ್ವರಿ ಶ್ರೀಧರ್, ನಾಗೇಂದ್ರಪ್ಪ,ಬಸವರಾಜ್ ಹರ್ತಿ, ನಿರ್ಮಲ, ಮೆಹಬೂಬ್, ಸವಿತಾ ಮುದ್ಗಲ್, ಬೆಳಕು ಪ್ರಿಯ ಹಾಗೂ ಎಲ್ಲ ಸಾಹಿತ್ಯ ಆಸಕ್ತರು, ಕಲಾವಿದರು, ಕವಿಗಳು ಉಪಸ್ಥಿತರಿದ್ದರು.

 

 

 

- Advertisement -  - Advertisement - 
Share This Article
error: Content is protected !!
";