ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಾಲಾ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ (ಆಡಳಿತ ) ಸೇವೆ ಸಲ್ಲಿಸಿ ಸೇವೆಯಿಂದ ವಯೋವೃದ್ದಿ ಗೊಂಡು ನಿವೃತ್ತಿ ಪಡೆದ ಕೃಷ್ಣಮೂರ್ತಿ ರವರಿಗೆ ಬೆಂಗಳೂರು ಗ್ರಾಮಾಂತರ ಶಿಕ್ಷಕರ ವೃಂದ ಹಾಗೂ ಸಹ ಸಿಬ್ಬಂದಿಗಳ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ತಾಲ್ಲೂಕಿನ ಬೆಸೆಂಟ್ ಪಾರ್ಕಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕ ನಾರಾಯಣ ಸ್ವಾಮಿ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಎಲ್ಲರಿಗೂ ನಿವೃತ್ತಿ ಎನ್ನುವುದು ಸರ್ವೇ ಸಾಮಾನ್ಯ ಆದರೆ ಕೃಷ್ಣಪ್ಪ ಸರ್ ನಿವೃತ್ತಿ ಹೊಂದುತ್ತಿರುವುದು ಒಬ್ಬ ದಕ್ಷ, ಸಹೃದಯಿ ಅಧಿಕಾರಿಯನ್ನು ಕಳೆದು ಕೊಳ್ಳುತ್ತಿರುವ ಭಾವನೆ ಉಂಟುಮಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತಮ ಫಲಿತಂಶಕ್ಕೆ ಶ್ರಮಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ವೃತ್ತಿ ನಿಷ್ಠೆ, ಪ್ರಾಮಾಣಿಕತೆ ನಮ್ಮೆಲ್ಲರಿಗೂ ಮಾದರಿ ಎಂದರು.
ವಯೋವೃದ್ಧಗೊಂಡು ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ನಮ್ಮ ನೆಚ್ಚಿನ ಗುರುಗಳು, ಅಧಿಕಾರಿಗಳು ಆದ ಕೃಷ್ಣಪ್ಪ ಅವರು ತಮ್ಮ ಉತ್ತಮ ನಡವಳಿಕೆಯಿಂದ ಕೇವಲ ವೃತ್ತಿ ಜೀವನದಲ್ಲಿ ಅಷ್ಟೇ ಅಲ್ಲದೇ ನಮ್ಮ ನಿತ್ಯ ಜೀವನದಲ್ಲೂ ಸ್ಫೂರ್ತಿ ತುಂಬಿದ್ದಾರೆ ಅವರ ನಿವೃತ್ತಿ ಜೀವನ ಸದಾ ಸುಖಮಯವಾಗಿರಲಿ ಎಂದು ಹಾರೈಸಿದರು.
ಹಲವು ಸಿಬ್ಬಂದಿಗಳು ತಮ್ಮ ವೃತ್ತಿ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ಭಾವುಕರಾದರು.
ಶಿಕ್ಷಕ ರೋಷನ್ ಬೇಗ್ ಮಾತನಾಡಿ ಇಂದು ಈ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿನ ಶಿಕ್ಷಕರು, ಅಧಿಕಾರಿಗಳು ಭಾಗವಹಿಸಲು ಮುಖ್ಯ ಕಾರಣ ಕೃಷ್ಣಮೂರ್ತಿ ಅವರ ಕಾರ್ಯ ವೈಖರಿ, ವ್ಯಕ್ತಿತ್ವ, ಅವರು ತಮ್ಮ ಉತ್ತಮ ಕಾರ್ಯಗಳಿಂದಲೇ ನಮ್ಮನ್ನು ಅವರತ್ತಾ ಆಕರ್ಷಣೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರ ಎಸ್ ಎಸ್ ಎಲ್ ಸಿ ಪರೀಕ್ಷೆ ನೆಡೆಸಿದ ವಿಧಾನ ಅವರ ಕಾರ್ಯವೈಖರಿಗೆ ಉತ್ತಮ ಉದಾಹರಣೆಯಾಗಿದೆ,ಚಿತ್ರಕಲೆ ಕುರಿತು ವಿಶೇಷ ಅಭಿರುಚಿ ಹೊಂದಿದ್ದು ರಾಜ್ಯ ಮಟ್ಟದಲ್ಲಿ ತಾಲ್ಲೂಕಿನ ಪ್ರತಿಭೆಗಳನ್ನು ಗುರುತಿಸಲು ಇವರ ಅವಧಿಯಲ್ಲಿ ಸಾಧ್ಯವಾಯಿತು ಎಂದರು.
ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ ಸಹ ಆಡಳಿತ ವೃದ್ಧ, ಜಿಲ್ಲೆಯ ಶಿಕ್ಷಕರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿನ ಶಿಕ್ಷಕರು ನನ್ನ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳು ನನಗೆ ಸಿಕ್ಕ ಬಹುಮಾನ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಅಧಿಕಾರಿ ವೃಂದ ಭಾಗವಹಿಸಿದ್ದರು.