Ad imageAd image

ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಹಿಂದಿ ಸಿನಿಮಾ ರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ
, ದೇಶದ ಸಿನಿಮಾ ರಂಗದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ಮಿಥುನ್ ಚಕ್ರವರ್ತಿ ಅವರು ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇದರ ಬೆನ್ನಲ್ಲೆ ಅವರು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದಾರೆ.

ಮಿಥುನ್ ಚಕ್ರವರ್ತಿ ಅವರು ಸಿನಿಮಾ ಮಾತ್ರವಲ್ಲದೆ ರಾಜಕಾರಣಿಯಾಗಿ, ಟಿವಿ ನಿರೂಪಕರಾಗಿಯೂ ಹೆಸರು ಸಂಪಾದಿಸಿದ್ದಾರೆ. ಸಿನಿಮಾಗಳ ನಿರ್ಮಾಪಕರಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಅವರು ಸಿನಿ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ.

1950 ರಲ್ಲಿ ಜನಿಸಿದ್ದ ಮಿಥುನ್ ಚಕ್ರವರ್ತಿ ಅವರು,1976 ರಲ್ಲಿ ಮೃಗಾಯಸಿನಿಮಾದಲ್ಲಿ ನಟಿಸುವ ಮೂಲಕ, ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆಗ ಅವರಿಗೆ 26 ವರ್ಷವಾಗಿತ್ತು. ಮೊದಲ ಸಿನಿಮಾದಲ್ಲಿನ ಅಭಿನಯಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತರಾಗಿದ್ದರು.

 ಅಕ್ಟೋಬರ್ 08 ರಂದು ನಡೆಯುವ ನ್ಯಾಷನಲ್ ಫಿಲಂ ಅವಾರ್ಡ್​ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

 

 

- Advertisement -  - Advertisement - 
Share This Article
error: Content is protected !!
";