ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆಯ 2 ನೇ ವಾರ್ಡ್ ಬಸವೇಶ್ವರ ನಗರದಲ್ಲಿ ಮನೆ ಮತ್ತು ಅಂಗಡಿಗಳ ಕಸವನ್ನು ಸಾರ್ವಜನಿಕರು ಓಡಾಡುವ ಜಾಗದಲ್ಲಿ ಕಸ ಹಾಕುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಹಾಗು ಸಾರ್ವಜನಿಕರಿಗೆ ವಾಸನೆಯಿಂದ ನೊಣ ಸೊಳ್ಳೆಗಳ ಕಾಟದಿಂದ ತುಂಬಾ ತೊಂದರೆ.
ಯಾಗುವುದನ್ನು ತಪ್ಪಿಸುವ ಸಲುವಾಗಿ ಮನೆಯಲ್ಲಿ ಕಸವನ್ನು ಹಸಿ ಕಸ ಹಾಗು ಒಣ ಕಸ ಬೇರ್ಪಡಿಸಿ ನಗರ ಸಭೆಯಿಂದ ಬರುವ ವಾಹನಗಳಿಗೆ ಹಾಕುವಂತೆ ನಗರಸಭೆಯ ಆಯುಕ್ತ ಕಾರ್ತಿಕೇಶ್ವರ್ ಸಾರ್ವಜನಿಕರಿಗೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಎಸ್.ಪದ್ಮನಾಭ, ಹಾಗೂ ನಗರಸಭಾ ಅಧಿಕಾರಿಗಳ ಸಾಮಾಜಿಕ ಕಾರ್ಯಕರ್ತ ಮುತ್ತಣ್ಣ ಹಾಗು ಕಸವಿಲೇವಾರಿ ಕಾರ್ಮಿಕರು ಸಾರ್ವಜನಿಕರು ಹಾಜರಿದ್ದರು.