ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಯೂಟರ್ನ್ರಾಮಯ್ಯ” “ವೈಟ್ನರ್” ಬಳಸಿದರೇ ಕಪ್ಪು ಚುಕ್ಕೆಗಳು ಮರೆಮಾಚಲು ಸಾಧ್ಯವೇ.? ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದೆ.
ಭ್ರಷ್ಟರಾಮಯ್ಯ ಅವರೇ ನೀವು ಮಾಡಿರುವ ಭ್ರಷ್ಟಾಚಾರ ಈಗ ತೆರದ ಪುಸ್ತಕ.. !
ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ, ಅಕ್ರಮವಾಗಿ ಕಬಳಿಸಿರುವ 14 ಸೈಟು ಹಿಂತಿರುಗಿಸಿರುವ “ಯೂಟರ್ನ್ಸಿದ್ದರಾಮಯ್ಯ ಅವರೇ.., ಎಂದು ಜೆಡಿಎಸ್ ಟೀಕಿಸಿದೆ.
ಕಳ್ಳ ಕದ್ದಿದ್ದನ್ನು ಹಿಂತಿರುಗಿಸಿದರೆ ಆತ ನಿರಪರಾಧಿಯಾಗಲು ಸಾಧ್ಯವೇ..?
ನೀವು ಅಧಿಕಾರದಲ್ಲಿ ಮುಂದುವರಿಯುವ ಯಾವ ಅರ್ಹತೆಯೂ ಉಳಿಸಿಕೊಂಡಿಲ್ಲ ಮೊದಲು ರಾಜೀನಾಮೆ ನೀಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.