ಜಂಗ್ಲಿ ಗ್ಯಾಂಗ್ ಅರೆಸ್ಟ್ ಮಾಡಿದ ಬೆಂಗಳೂರಿನ ಪೊಲೀಸರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುರುತು ಪತ್ತೆಯಾಗದಂತೆ ಖದೀಮರು ಮುಖಕ್ಕೆ ಮಾಸ್ಕ್
, ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕ್ಷಣಾರ್ಧದಲ್ಲಿ ಒಂಟಿ ಮನೆಗಳ ಬೀಗ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನ ಕದ್ದು ಮನೆಗಳವು ಮಾಡಿ ಪರಾರಿಯಾಗುತ್ತಿದ್ದ ಕುಖ್ಯಾತ ಮನೆಗಳ್ಳ ಜಂಗ್ಲಿ ಆ್ಯಂಡ್ ಗ್ಯಾಂಗ್ ಅನ್ನು ಬೆಂಗಳೂರಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮನೆಗಳವು ಪ್ರಕರಣಗಳ ಆರೋಪಿಗಳಾದ ಜೈದೀಪು ಅಲಿಯಾಸ್ ಜಂಗ್ಲಿ, ಚಂದನ್ @ ಗುಂಡ, ಸತೀಶ್ @ಬುಡ್ಡ, ದೀಪಕ್ @ದೀಪು ಮತ್ತು ಮಿಥುನ್ @ ಮಿಲ್ಕಿ ಇವರುಗಳನ್ನು ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 10.18 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನ, 2 ಕೆ.ಜಿ.ಗೂ ಅಧಿಕ ಬೆಳ್ಳಿ, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಗಳವು ಮಾಡಲಿಕ್ಕೆಂದೆ ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ರೌಂಡ್ಸ್ ಹಾಕಿ ಒಂಟಿ ಮನೆಗಳನ್ನು ಗುರುತಿಸಿ ಕೈಚಳಕ ತೋರಿಸುತ್ತಿದ್ದರು.

ಅದರಂತೆ ಕಳೆದ ಸೆಪ್ಟೆಂಬರ್ 17ರಂದು ಆರ್.ಆರ್.ನಗರದ ಗಟ್ಟಿಗೇರೆ ನಿವಾಸದಲ್ಲಿ ಚಂದ್ರಶೇಖರ ಎಂಬುವರ ಮನೆಗೆ ಕನ್ನಹಾಕಿದ್ದರು. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‌ನ ಶಿಷ್ಯನೇ ಈ ಜೈದೀಪು. ಇದೀಗ ಈ ಜಂಗ್ಲಿ ಗ್ಯಾಂಗ್‌ಅರೆಸ್ಟ್‌ಆಗಿದೆ.

ಕದ್ದ ಚಿನ್ನವನ್ನು ಸ್ನೇಹಿತರಿಗೆ ಮಾರಾಟ-
ಚಿನ್ನಾಭರಣ ಕದ್ದು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನವಾಗಿದೆ. ವಿಲ್ಲಾಗಳನ್ನೇ ಟಾರ್ಗೆಟ್‌ಮಾಡುತ್ತಿದ್ದ ಖದೀಮರು ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ಟು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು.

ರಾಮ್ ಕುಮಾರ್(23), ಇಸೈರಾಜ್ (27) ಬಂಧಿತ ಆರೋಪಿಗಳು. ಮನೆಯಲ್ಲಿ ಮಲಗಿರುವ ಸಮಯದಲ್ಲೇ ಖದೀಮರು ಕನ್ನ ಹಾಕುತ್ತಿದ್ದರು. ಬೆಂಗಳೂರಿನ ಬಾಗಲೂರು ವ್ಯಾಪ್ತಿಯ ಕಣ್ಣೂರುಹಳ್ಳಿಯ ವಿಲ್ಲಾದಲ್ಲಿ ಕಳ್ಳರು ಕೈಚಳಕ ತೋರಿದ್ದರು.

ವಿಲ್ಲಾ ಮಾಲೀಕ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದ ಬಾಗಲೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ 252 ಗ್ರಾಂ ಚಿನ್ನಾಭರಣ ಕದ್ದು ಒಂದು ತಿಂಗಳ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು.

ಸಿಸಿಟಿವಿ, ಟವರ್ ಲೊಕೇಶನ್ ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ. ಬಂಧನದ ಬಳಿಕ ಈ ಹಿಂದೆ ಕಳ್ಳತನ ಮಾಡಿದ್ದ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ ಒಟ್ಟು 30 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

 

 

 

 

- Advertisement -  - Advertisement -  - Advertisement - 
Share This Article
error: Content is protected !!
";