ಕಸಾಪ ವತಿಯಿಂದ ಗಾಂಧಿ, ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಹಾತ್ಮ ಗಾಂಧೀಜಿ ಅವರು ಭಾರತೀಯರ ಮನಸ್ಸಿನಲ್ಲಿ ಮಾತ್ರವಲ್ಲದೆ  ವಿಶ್ವದಾದ್ಯಂತ  ಜನರ  ಮನಸೆಳೆಯದವರು.  ವಿಶ್ವಸಂಸ್ಥೆ  ಮಹಾತ್ಮ‌ ಗಾಂಧೀಜಿ ಜನ್ಮದಿನವನ್ನು  ವಿಶ್ವ ಅಹಿಂಸಾ ದಿನವನ್ನಾಗಿ  ಆಚರಿಸಲಾಗುತ್ತದೆ ಎಂದು ಕನ್ನಡಪರ  ತ.ನ.ಪ್ರಭುದೇವ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ನಗರದ ಮಹಾತ್ಮಗಾಂಧಿ ಪ್ರತಿಮೆಯ‌    ಆವರಣದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ  ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ಮಹಾತ್ಮಗಾಂಧೀಜಿ ಅವರ  ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಪ್ರತಿರೋಧ    ಭಾರತ ಸ್ವಾತಂತ್ರ್ಯ ಚಳುವಳಿಗೆ ಮಾತ್ರ ಸೀಮಿತವಾಗಲಿಲ್ಲ. ವಿಶ್ವದ ಹಲವು ‌ದೇಶದ ನಾಗರಿಕರಿಗೆ ಮಾನವ ಹಕ್ಕುಗಳು ಮತ್ತು ವಿಮೋಚನಾ ಚಳುವಳಿಗಳ ಮೇಲೆ ಅಳವಾದ ಪ್ರಭಾವ ಬೀರಿತು.‌ 

ಮಹಾತ್ಮ ಗಾಂಧೀಜಿಯವರು  ಮಾನವಹಕ್ಕುಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ನಡೆಸಿದ  ಹೋರಾಟಗಳು  ಜಾಗತಿಕ ಮನ್ನಣೆಯನ್ನು ಪಡೆದವು.‌  ಬ್ರಿಟಿಷರ ನಿಯಂತ್ರಣದಿಂದ ಭಾರತವನ್ನು ವಿಮೋಚನೆಗೊಳಿಸಿದ  ಹೋರಾಟವನ್ನು ಭಾರತೀಯರು ಎಂದೂ ಮರೆಯಲಾರರು. ಮಹಾತ್ಮಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ ಎಂದರು. 

       ಲಾಲ್ ಬಹದ್ದೂರ್ ಶಾಸ್ತ್ರಿ ಅವರು   ಪ್ರಮಾಣಿಕತೆಮತ್ತು ವಿನಮ್ರತೆ, ಸಹಿಷ್ಣುತೆ ಮತ್ತು ದೃಢನಿಶ್ಚಯವುಳ್ಳ ವ್ಯಕ್ತಿತ್ವ ಹೊಂದಿದ್ದವರು.   ಭಾರತವನ್ನು ಪ್ರಗತಿಯೆಡೆಗೆ  ಮುನ್ನಡೆಸಿದವರು.   ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು.

ಜೈ ಜವಾನ್ ಮತ್ತು ಜೈ ಕಿಸಾನ್  ಘೋಷ ವಾಕ್ಯದ ಮೂಲಕ ದೇಶದ ಅಭಿವೃದ್ಧಿಯ ಹರಿಕಾರ ಎನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಬಾಲ್ಯದಲ್ಲಿಯೇ ಧೈರ್ಯ, ಸಾಹಸ ಪ್ರೇಮ, ತಾಳ್ಮೆ, ಸ್ವಯಂ ನಿಯಂತ್ರಣ, ಸೌಜನ್ಯ ಮತ್ತು ನಿಸ್ವಾರ್ಥತೆಯಂತಹ ಗುಣಗಳನ್ನು ಬೆಳೆಸಿಕೊಂಡರು ಎಂದರು.

   ಕಾರ್ಯಕ್ರಮದಲ್ಲಿ  ದೊಡ್ಡಬಳ್ಳಾಪುರ ನಗರಸಭೆ  ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ  ವಿ.ಎಸ್.ರವಿಕುಮಾರ್ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ಮಾಜಿ‌ ಖಜಾಂಚಿ  ನಂ.ಮಹಾದೇವ್ದೊಡ್ಡಬಳ್ಳಾಪುರ ತಾಲ್ಲೂಕು ‌ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು

ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್,    ಗೌರವ ಕಾರ್ಯದರ್ಶಿ ಎ.ಜಯರಾಮ, ಕೋಶಾಧ್ಯಕ್ಷ  ಸಾ.ಲ.ಕಮಲನಾಥ್ಕಸಬಾ ಘಟಕದ  ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ರಾಜು ಸಣ್ಣಕ್ಕಿಮುನಿರಾಜುನಾಗರತ್ನಮ್ಮಸಫೀರ್ಮಲ್ಲೇಶ್,    ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ‌ ಆಯುಕ್ತ ವೆಂಕಟರಾಜುಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ಆರ್ಯವೈಶ್ಯ ಮಂಡಲಿಯ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

 

- Advertisement -  - Advertisement - 
Share This Article
error: Content is protected !!
";