ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ತಳಕು ಹೋಬಳಿಯ ಪರಶುರಾಮಪುರ ಠಾಣಾ ವ್ಯಾಪ್ತಿಯ ಸಿರಿವಾಳ ಓಬಳಾಪುರದ ಗ್ರಾಮಕ್ಕೆ ಹೊಂದಿಕೊಂಡಿರುವ ಕೋಡಿಹಟ್ಟಿಯ ಜಿ.ಎಂ.ಚಂದ್ರಪ್ಪ ಎಂಬುವವರಿಗೆ ಸೇರಿದ ಜಮೀನು ರಿ.ಸರ್ವೆ, ನಂ ೮೯/೧, ೮೯/೨ರ ಒಟ್ಟು ೭ ಎಕರೆ ಪ್ರದೇಶದಲ್ಲಿ
೩ ಸಾವಿರ ಬಾಳೆ, ೫೬೦೦ ಅಡಿಕೆ ಗಿಡ ಬೆಳೆದಿದ್ದು ಸುಮಾರು ಸುಮಾರು ಐದು ವರ್ಷಗಳಿಂದ ಅಡಿಕೆ ಬೆಳೆಯನ್ನು ಚಂದ್ರಪ್ಪ ಮತ್ತು ಕುಟುಂಬ ಸಂರಕ್ಷಣೆ ಮಾಡಿದ್ದು, ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ನೀರು ಹಾಯಿಸುವ ಪೈಪ್, ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿದ್ಧಾರೆ.
ಗುರುವಾರ ಬೆಳಗ್ಗೆ ಜಮೀನಿಗೆ ಬಂದ ಮಾಲೀಕ ಜಿ.ಎಂ.ಚಂದ್ರಪ್ಪ ಪ್ರತಿದಿನದಂತೆ ಜಮೀನಿನಲ್ಲಿ ಸುತ್ತಾಡುವ ಸಂದರ್ಭದಲ್ಲಿ ನೀರಿನ ಪೈಪ್ ತುಂಡು ಮಾಡಿದ್ದು ಕಂಡುಬಂದಿದೆ.
ಕೂಡಲೇ ನೋಡಲಾಗಿ ಫಸಲಿಗೆ ಬಂದಿದ್ದ ಸುಮಾರು ೧೨ ಅಡಿಕೆ, ೬ ಬಾಳೆ ಗಿಡಗಳನ್ನು ಕಡಿದು ಹಾಕಿದ್ದು ಕಂಡುಬಂತು. ಕೂಡಲೇ ಗಾಬರಿಗೊಂಡ ಆತನ ಗ್ರಾಮಸ್ಥರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ತೆರಳಿ ನನ್ನ ಜಮೀನಿನಲ್ಲಿ ಅಡಿಕೆ, ಬಾಳೆ ನಾಶಪಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾನೆ.