ವಸತಿ ರಹಿತರಿಗೆ ಮನೆ ನಿರ್ಮಿಸಲು ಜಾಗ ಕಾಯ್ದಿರಿಸಿದ ಶಾಸಕರು

News Desk

ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಹೊಸದುರ್ಗ ಪಟ್ಟಣ ವ್ಯಾಪ್ತಿಯಲ್ಲಿ ೨೩ ವಾರ್ಡ್‌ಗಳಿದ್ದು ಸುಮಾರು ೩೫ ಸಾವಿರ ಜನ ಪಟ್ಟಣ ವಾಸಿಗಳಾಗಿದ್ದು ೧೫೦೦ ಕ್ಕೂ ಹೆಚ್ಚು ವಸತಿ ರಹಿತ ಬಡ ಕುಟುಂಬಗಳು ಗುರುತಿಸಲಾಗಿದ್ದು ನಿವೇಶನ ಮತ್ತು ವಸತಿ ಕಲ್ಪಿಸುವ ದೃಷ್ಠಿಯಿಂದ ಗೊರವಿನಕ್ಲಲು ರಿ.ಸ.ನಂ.೮೬ ರಲ್ಲಿ ೨೧ ಎಕರೆ ಜಾಗವನ್ನು ಡೀಮ್ಡ್ ಫಾರೆಸ್ಟ್ ನಿಂದ ಪುನಃ ಕಂದಾಯ ಇಲಾಖೆಗೆ ಪಡೆದು

ಆಶ್ರಯ ಯೋಜನೆಯಡಿ ಪುರಸಭೆಗೆ ಹಸ್ತಾಂತರಿಸುವ ಸ್ಥಳವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರ್, ಮುಖ್ಯಾಧಿಕಾರಿ, ಅರಣ್ಯಾಧಿಕಾರಿ ಹಾಗೂ ಸರ್ವೇಯರ್ ತಂಡ ಪರಿಶೀಲಿಸಿದ್ದು ತುರ್ತಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

  ಪುರಸಭಾ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಾಗ ದೊರಕಿರುವುದು ಅತ್ಯಂತ ಸಂತಸವಾಗಿದ್ದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರವರು ಪೌರಕಾರ್ಮಿಕರು ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿಗಳ ನಿಗಾ ಸಮಿತಿಯ ಅಧ್ಯಕ್ಷರಾಗಿದ್ದು ಕಾರ್ಮಿಕರಿಗೆ ಮತ್ತು ನೀರು ಸರಬರಾಜು ಸಹಾಯಕರಿಗೆ ೩ ಎಕರೆ ಪ್ರತ್ಯೇಕ ಜಾಗವನ್ನು ಕಾಯ್ದಿರಿಸಿರುವುದನ್ನು

ಸ್ಥಳ ಪರಿಶೀಲಿಸಿ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ನನಗೆ ಸೂಚಿಸಿ ಇತರೆ ಎಲ್ಲಾ ಸೌಲಭ್ಯಗಳನ್ನು ಸಹ ನೀಡಿ ಪಟ್ಟಣವನ್ನು ಸ್ವಚ್ಛವಾಗಿಡಲು ಹಾಗೂ ಸಮರ್ಪಕ ಕುಡಿಯುವ ನೀರಿಗೆ ಆದ್ಯತೆ ನೀಡಲು ಸೂಚನೆ ನೀಡಿದ್ದಾರೆಂದು ಮುಖ್ಯಾಧಿಕಾರಿ ತಿಮ್ಮರಾಜು.ಜಿ.ವಿ ತಿಳಿಸಿದರು.

  ಈ ಸಂದರ್ಭದಲ್ಲಿ ತಹಶೀಲ್ದಾರ್ ತಿರುಪತಿ ಪಾಟೀಲ್, ವಲಯ ಅರಣ್ಯಾಧಿಕಾರಿ ಸುನಿಲ್, ಸರ್ವೇಯರ್ ಕರಿಯಪ್ಪ, ಎಡಿಎಲ್ಆರ್ ವಿನಯ್, ಕಂದಾಯಾಧಿಕಾರಿ ಯೋಗೇಶ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಹರೀಶ್, ರಾಘವೇಂದ್ರ ಹಾಜರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";