ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ ಇದೇ ಅ.5 ರಿಂದ 13 ರವರೆಗೆ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತೋತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ ನಡೆಯಲಿದ್ದು,
ರಾಜ್ಯದ ಎಲ್ಲಾ 102.9 ಎಫ್.ಎಂ ಬಾನುಲಿ ಕೇಂದ್ರಗಳಿಂದ ಪ್ರತಿದಿನ ಬೆಳಿಗ್ಗೆ 7.45ಕ್ಕೆ, ವಿವಿಧ ಭಾರತಿ ಬೆಂಗಳೂರು ಕೇಂದ್ರದಿಂದ ಬೆಳಿಗ್ಗೆ 8.10ಕ್ಕೆ ಹಾಗೂ 101.3 ಎಫ್.ಎಂ
ಬೆಂಗಳೂರಿನಿಂದ ಬೆಳಿಗ್ಗೆ 9ಕ್ಕೆ ಪ್ರತಿದಿನ ನಡೆಯುವ ಕಾರ್ಯಕ್ರಮದ ವಿವರಣೆ ನೀಡುವುದರ ಜೊತೆಗೆ ವಿವಿಧ ಗಣ್ಯವ್ಯಕ್ತಿಗಳಿಂದ ಸಂದೇಶ ಪ್ರಸಾರ ಮಾಡಲಿದೆ.
ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಆಕಾಶವಾಣಿ ಚಿತ್ರದುರ್ಗ ಲೈವ್ ಸ್ಟ್ರೀಮಿಂಗ್ ಮತ್ತು ಪ್ರಸಾರ ಭಾರತಿ ನ್ಯೂಸ್ ಆನ್ ಏರ್ ಆಪ್ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು ಎಂದು ಚಿತ್ರದುರ್ಗ ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್.ಭಟ್ ತಿಳಿಸಿದ್ದಾರೆ.