ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಿ-ಜಿಪಂ ಸಿಇಒ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.  

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಕಾವೇರಿ ಆಸ್ವತ್ರೆ ವತಿಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ, ಸ್ಟ್ರೋಕ್, ಸಿಪಿಆರ್ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯು ಬರಗಾಲ ಪ್ರದೇಶ ಮತ್ತು ಅತೀ ಹೆಚ್ಚು ಎಸ್. ಸಿ ಮತ್ತು ಎಸ್. ಟಿ ಹಾಗೂ ಹಿಂದುಳಿದ ವರ್ಗಗಳಿರುವ ಪ್ರಯುಕ್ತ ಅವರನ್ನು ಅಲೆದಾಡಿಸದೇ, ಗೌರವಯುತವಾಗಿ ಕಂಡು, ಒಳ್ಳೆ ಮಾತನಾಡಿ ಅವರಿಗೆ ಪ್ರಾಮಾಣಿಕವಾಗಿ ಆರೋಗ್ಯ ಸೇವೆಯನ್ನು ಒದಗಿಸಿ ಕೊಡುವುದು ಸಮುದಾಯ ಆರೋಗ್ಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಾವು, ನಾಯಿ ಮತ್ತು ಬೇರೆ ಬೇರೆ ಪ್ರಾಣಿಗಳ ಕಡಿತ, ಅಲರ್ಜಿ, ಅಲರ್ಜಿಯಿಂದಾದ ಕಾಯಿಲೆಗಳು, ಅಪಘಾತಗಳು, ಪಾಶ್ರ್ವವಾಯು, ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಭವಿಸುವ ದೈಹಿಕ ತೊಂದರೆ.

ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮಥ್ರ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದಂತಾಗುವುದು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಎದೆ ನೋವು, ಎದೆಯ ಬಿಗಿತ, ಎದೆಯ ಒತ್ತಡ ಮತ್ತು ಎದೆಯ ಅಸ್ವಸ್ಥತೆ,

ಉಸಿರಾಟದ ತೊಂದರೆ, ದೇಹದ ಭಾಗಗಳಲ್ಲಿ ರಕ್ತನಾಳಗಳು ಕಿರಿದಾಗಿದ್ದರೆ ಕಾಲುಗಳು ಅಥವಾ ತೋಳುಗಳಲ್ಲಿ ನೋವು, ಮರಗಟ್ಟುವಿಕೆ, ದೌರ್ಬಲ್ಯ ಅಥವಾ ಶೀತ, ಕುತ್ತಿಗೆ, ದವಡೆ, ಗಂಟಲು, ಮೇಲಿನ ಹೊಟ್ಟೆ ಅಥವಾ ಬೆನ್ನಿನಲ್ಲಿ ನೋವು ಇನ್ನೂ ಅನೇಕ ವಿವಿಧ ಕಾಯಿಲೆಗಳ ಬಗ್ಗೆ ಹಾಗೂ ತುರ್ತು ಚಿಕಿತ್ಸೆಗಳಲ್ಲಿ ಎಚ್ಚರ ವಹಿಸಿ ಆರೋಗ್ಯ ನೀಡುವ ಬಗ್ಗೆ ತರಬೇತಿ ಕಾರ್ಯಗಾರದಲ್ಲಿ ತರಬೇತಿದಾರರು ವಿವರವಾಗಿ ತಿಳಿಸಿ ಕೊಡಲಿದ್ದಾರೆ.

ತರಬೇತಿ ಪಡೆದ ನಂತರ ತಾವುಗಳು ಸಮುದಾಯದ ಜನರಿಗೆ ಉತ್ತಮ ಆರೋಗ್ಯ ನೀಡುವುದು ನಿಮ್ಮಗಳ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿ ಮಠ, ಬೆಂಗಳೂರು ಕಾವೇರಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಸುರೇಂದ್ರ ಸಂಪತ್, ನ್ಯೂರೋಲಾಜಿಸ್ಟ್ ಡಾ. ಹೆಚ್. ಸಂತೋμï ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";