ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಯುದ್ದೋಪಾದಿಯಲ್ಲಿ ಪಕ್ಷ ಸಂಘಟನೆ ಮುಂದಾಗಬೇಕು. ಯುದ್ದಕ್ಕೆ ಇಳಿದಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಕೇಂದ್ರದಲ್ಲಿ ಮೂರನೆ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರಮೋದಿರವರ ಕೈಬಲಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿವಿಧ ಮಂಡಲಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಕರೆ ನೀಡಿದರು.
ದಾವಣಗೆರೆ ರಸ್ತೆಯಲ್ಲಿರುವ ಜಗಳೂರು ಮಹಲಿಂಗಪ್ಪ ಕಂಫರ್ಟ್ಸ್‌ನಲ್ಲಿ ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಧುಗಿರಿ ಜಿಲ್ಲೆಗಳ ವಿವಿಧ ಮಂಡಲ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಶುಕ್ರವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾಥಮಿಕ ಸದಸ್ಯತ್ವದ ಗುರಿ ಎಷ್ಟು, ಎಷ್ಟು ಸದಸ್ಯತ್ವವಾಗಿದೆ. ಗುರಿ ತಲುಪಲು ಏಕೆ ಸಾಧ್ಯವಾಗಿಲ್ಲ. ಉಳಿದಿರುವ ಇನ್ನು ಹದಿನಾಲ್ಕು ದಿನಗಳಲ್ಲಿ ಎಷ್ಟು ಸದಸ್ಯತ್ವ ಮಾಡಬಹುದು ಎನ್ನುವುದರ ಬಗ್ಗೆ ಚರ್ಚಿಸಿದ ಆರ್.ಅಶೋಕ್ ಗಣೇಶ್ ಹಬ್ಬ ಮುಗಿಯಿತು. ಈಗ ನವರಾತ್ರಿ ಬಂದಿದೆ. ಮನೆಯಲ್ಲಿ ವಯಸ್ಸಾದವರು ಸತ್ತಿದ್ದಾರೆ.
ತಾಲ್ಲೂಕು ಅಧ್ಯಕ್ಷ, ಜಿಲ್ಲಾ ಪದಾಧಿಕಾರಿಗಳು ಸರಿಯಿಲ್ಲ ಎನ್ನುವ ಯಾವ ಕಾರಣವನ್ನು ಹೇಳುವಂತಿಲ್ಲ. ಭಾರತೀಯ ಜನತಾಪಕ್ಷವನ್ನು ಪ್ರಜಾಪ್ರಭುತ್ವ ಪಕ್ಷವನ್ನಾಗಿಸಬೇಕಾಗಿರುವುದರಿಂದ ನಿಮಗೆ ನೀಡಿರುವ ಗುರಿ ತಲುಪಬೇಕೆಂದು ಸೂಚಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್‌ರೆಡ್ಡಿ, ವಿಧಾನಪರಿಷತ್ ಸದಸ್ಯರುಗಳಾದ ಕೆ.ಎಸ್.ನವೀನ್, ಚಿದಾನಂದಗೌಡ, ಧನಂಜಯ ಸರ್ಜಿ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಗಾಯತ್ರಿ ಸಿದ್ದೇಶ್ವರ್, ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ.ಹನುಮಂತೆಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಕೆ.ಟಿ.ಕುಮಾರಸ್ವಾಮಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.