ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಮಳ್ಳ ಮುಖ್ಯಮಂತ್ರಿ!! ಭೂಗಳ್ಳ @ ಸಿಡಿ ಶಿವು ಉಪ ಮುಖ್ಯಮಂತ್ರಿ!! ಇದು ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟಿರುವ ಕಳಂಕಿತರ ಭಾಗ್ಯ!!! ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಕದ್ದ ವಾಚ್ ಕಟ್ಟಿದವರು ಯಾರು? ಮುಡಾವನ್ನು ಮುಕ್ಕಿದ ಮುಖ್ಯಮಂತ್ರಿ ಯಾರು? ಸೈಟುಗಳಿಗೆ ಬೆಲೆ ಕಟ್ಟಿದ ರಿಯಲ್ ಎಸ್ಟೇಟ್ ವ್ಯಾಪಾರಿ ಯಾರು? ಲೂಟಿ, ದಂಧೆಗಳ ಅಪರಾವತಾರ, ಗುತ್ತಿಗೆದಾರರನ್ನು ಹಿಂಸಿಸಿ ಕೊಳ್ಳೆ ಹೊಡೆದ ಕಲೆಕ್ಷನ್ ಕಿಂಗ್ ಡೂಪ್ಲಿಕೇಟ್ ಸಿಎಂ ಯಾರು? ಎಂದು ಜೆಡಿಎಸ್ ಪ್ರಶ್ನಿಸಿದೆ.
ಪ್ರವಾಹ ಸಂತ್ರಸ್ತರ ಹಣವನ್ನು, ಅದರಲ್ಲೂ ಜನರು ದೇಣಿಗೆ ಕೊಟ್ಟ ಹಣವನ್ನು ವಿಮಾನದ ಟಿಕೆಟ್ಟಿಗೆ, ಫೈವ್ ಸ್ಟಾರ್ ಹೋಟೆಲ್ ಮೋಜುಮಸ್ತಿಗೆ ಧಾರೆ ಎರೆದಿದ್ದು ಯಾರು? ಯಾವ ಪಕ್ಷ? ಹೇಳುವಿರಾ ಕಪಟಿ ಕರ್ನಾಟಕ ಕಾಂಗ್ರೆಸ್ ?? ಎಂದು ಜೆಡಿಎಸ್ ಕೆಣಕಿದೆ.
ಒಂದು ಹೆಗಲ ಮೇಲೆ ರಿಯಲ್ ಎಸ್ಟೇಟ್ ರಾಮಯ್ಯ! ಇನ್ನೊಂದು ಹೆಗಲ ಮೇಲೆ ಭಾರತದ ಅತಿದೊಡ್ಡ ಭ್ರಷ್ಟ ಸಿಡಿಶಿವು!! ಹೇಸಿಗೆ, ನಿಮ್ಮ ಮುಖವನ್ನೊಮ್ಮೆ ನೋಡಿಕೊಳ್ಳಿ. ನೀವು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತೀರಿ..
ಲಜ್ಜೆಗೇಡಿಗಳು. ಕುಮಾರಸ್ವಾಮಿ ಅವರಿಗೆ ಕೊಡುವುದು ಗೊತ್ತು, ನಿಮಗೆ ಬಾಚುವುದು ಗೊತ್ತು. ಕಾಮಾಲೆ ಕಾಂಗ್ರೆಸ್, ಕರ್ನಾಟಕಕ್ಕೆ ಅಂಟಿದ ವೈರಸ್ ಜೆಡಿಎಸ್ ಲೇವಡಿ ಮಾಡಿದೆ.