ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮದ ಮನೆಯೊಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದು ಗೃಹಪಯೋಗಿ ಬೆಲೆ ಬಾಳುವ ವಸ್ತುಗಳು ಸುಟ್ಟು ಅಪಾರ ನಷ್ಟವಾಗಿರುವ ಘಟನೆ ಸಂಭವಿಸಿದೆ.
ತಾಲೂಕಿನ ಹಾನಗಲ್ ಗ್ರಾಮದ ಅನ್ನಪೂರ್ಣ ಲೇಟ್ ತಿಪ್ಪೇಸ್ವಾಮಿ ಎಂಬುವರ ಮನೆ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ವಾಷಿಂಗ್ ಮಿಷನ್, ಪ್ರಿಡ್ಜ್, ಹಾಗೂ ಇನ್ನಿತರ ಸುಮಾರು ೨ ಲಕ್ಷ ರೂ. ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಈ ಶಾರ್ಟ್ ಸರ್ಕ್ಯೂಟ್ ನಿಂದ ತಗುಲಿದ ಬೆಂಕಿಗೆ ಮನೆಯು ಭಾಗಶಃ ಹಾನಿಯಾಗಿದೆ. ಮನೆಗೆ ಬೆಂಕಿ ಬಿದ್ದ ತಕ್ಷಣ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ ತಕ್ಷಣ ಅಗ್ನಿ ಶಾಮಕ ಠಾಣೆಯ ಪ್ರಭಾರೆ ಠಾಣಾಧಿಕಾರಿ ಸಿ.ಹೊನ್ನೂರಪ್ಪ, ಸಿಬ್ಬಂದಿಗಳಾದ ದೀಪಕ್, ಬಾಬು ರಾಜೇಂದ್ರ ಪ್ರಸಾದ್, ಮುನೀರ್ ಸನ್ನಿದಿ , ವೆಂಕಟೇಶ್ ನಾಯ್ಕ್ ರವರು ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು ೨ ಲಕ್ಷ ರೂ. ನಷ್ಟವಾಗಿರಲಿದೆ ಎಂದು ಅಂದಾಜಿಸಲಾಗಿದೆ.