ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ವ್ಯಕ್ತಿಗಳು ಕಾಣೆಯಾದ ಕುರಿತು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಗರದ ಜೋಗಿಮಟ್ಟಿ ರಸ್ತೆಯ ಸುಮಾರು 20 ವರ್ಷದ ಜೆ.ನಾಗರಾಜ್ ತಂದೆ ಜಯರಾಂ ಕಾಣೆಯಾದ ಕುರಿತು ಸೆ.14 ರಂದು ಪ್ರಕರಣ ದಾಖಲಾಗಿದೆ. ಜೆ. ನಾಗರಾಜ್, ಸು.5.3 ಅಡಿ ಎತ್ತರ, ಕೋಲುಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕುರುಚಲು ಗಡ್ಡ, ಕಪ್ಪು ಕೂದಲು ಹೊಂದಿದ್ದಾನೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಶರ್ಟ್ ಧರಿಸಿರುತ್ತಾನೆ.
ನಗರದ ಜೆ.ಸಿ.ಆರ್ ಬಡಾವಣೆಯ ಸುಮಾರು 30 ವರ್ಷದ ಅಶೋಕ ಗೋಸಾಯಿ ತಂದೆ ಭರತ್ ಗೋಸಾಯಿ ಕಾಣೆಯಾದ ಕುರಿತು ಸೆ.27ರಂದು ಪ್ರಕರಣ ದಾಖಲಾಗಿದೆ.
ಅಶೋಕ ಗೋಸಾಯಿ ಸು.5.5 ಅಡಿ ಎತ್ತರ, ದುಂಡು ಮುಖ, ದೃಢವಾದ ಮೈಕಟ್ಟು ಕಪ್ಪು ಕೂದಲು ಹೊಂದಿದ್ದು, ಬಲಗೈ ಮೇಲೆ ಪ್ರೇಮ್ ಎಂದು ಇಂಗ್ಲೀಷ್ನಲ್ಲಿ ಅಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಜೀನ್ಸ್ ಪ್ಯಾಂಟ್, ರೆಡ್ ಕಲರ್ ಶರ್ಟ್ ಧರಿಸಿರುತ್ತಾರೆ.
ಧಾರವಾಡ ಜಿಲ್ಲೆಯ ಸಿಂಗನಕೆರೆ ಬಡಾವಣೆಯ ಸುಮಾರು 35 ವರ್ಷದ ಲಕ್ಷ್ಮಿ ಗಂಡ ಸುರೇಶ್ ಚಿತ್ರದುರ್ಗ ಜಿಲ್ಲೆಯ ಸಖಿ ಘಟಕದಿಂದ ಕಾಣೆಯಾದ ಕುರಿತು ಸೆ.30ರಂದು ಪ್ರಕರಣ ದಾಖಲಾಗಿದೆ. ಲಕ್ಷ್ಮಿ ಸು.5.3 ಅಡಿ ಎತ್ತರ, ಕಪ್ಪು ಕೂದಲು, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಕಾಣೆಯಾದ ವ್ಯಕ್ತಿಗಳ ಕುರಿತು ಮಾಹಿತಿ ಕಂಡು ಬಂದಲ್ಲಿ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08194-222333, 9480803146 ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.