ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಬನಶಂಕರಿ ಅಮ್ಮನವರಿಗೆ ಭಾನುವಾರ ನವರಾತ್ರಿ ಪ್ರಯುಕ್ತ ಹಣ್ಣುಗಳ ಅಲಂಕಾರದ ವಿಶೇಷ ಪೂಜೆ ಮಾಡಲಾಗಿತ್ತು.
ಸೇಬು, ದಾಳಿಂಬೆ, ಮೋಸಂಬಿ, ಸಪೋಟ, ಕರುಬೂಜ, ಪೈನಾಪಲ್ ಸೇರಿದಂತೆ ಮತ್ತಿತರ ಹಣ್ಣುಗಳಿಂದ ಆಕರ್ಷಕವಾಗಿ ಬನಶಂಕರಿ ದೇವಿಗೆ ಮಾಡಿದ್ದ ಅಲಂಕಾರ ಭಕ್ತರ ಗಮನ ಸೆಳೆಯಿತು.
ಆಕರ್ಷಕವಾದ ಹಣ್ಣಿನ ಅಲಂಕಾರ ನೋಡಿ ಭಕ್ತರು ಕಣ್ತುಂಬಿಕೊಂಡರು.