ಸಿಟಿ ಇನ್ಸ್‍ಟ್ಯೂಟ್: ಕರಡು ಮತದಾರರ ಪಟ್ಟಿ ಪ್ರಕಟ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸಿಟಿ ಇನ್ಸ್‍ಟ್ಯೂಟ್ ಆಡಳಿತ  ಮಂಡಳಿಯ ಮುಂದಿನ ಐದು (5) ವರ್ಷಗಳ ಅವಧಿಗೆ ಸಾಮಾನ್ಯ ಚುನಾವಣೆ ನಿಗಧಿಪಡಿಸಬೇಕಾಗಿದ್ದು, ಈ ಚುನಾವಣೆ ಸಂಬಂಧ 2024ರ ಆಗಸ್ಟ್ 31ರ ಅಂತ್ಯಕ್ಕೆ ಇದ್ದಂತೆ ಅರ್ಹ ಹಾಗೂ ಅನರ್ಹ ಸಾಮಾನ್ಯ ಸದಸ್ಯರ ಕರಡುಪಟ್ಟಿ,

ಅರ್ಹ ಅಜೀವ ಹಾಗೂ ಅನರ್ಹ ಅಜೀವ ಸದಸ್ಯರ ಕರಡುಪಟ್ಟಿ ಹಾಗೂ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಾಗ ಪರಿಗಣಿಸದೇ ಇರುವವರ  ಪಟ್ಟಿಗಳ ಕರಡು ಮತದಾರರ ಪಟ್ಟಿಗಳನ್ನು ನೋಡಲ್ ಅಧಿಕಾರಿಗಳು ಹಾಗೂ ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕರು ಸಲ್ಲಿಸಿದ್ದು, ಈ ಕರಡು ಮತದಾರರ ಪಟ್ಟಿಯನ್ನು ಚಿತ್ರದುರ್ಗ ಸಿಟಿ ಇನ್ಸ್‍ಟ್ಯೂಟ್ ಸೂಚನಾ ಫಲಕದಲ್ಲಿ ಅ.07ರಂದು ಪ್ರಕಟಿಸಲಾಗಿದೆ.

ಕರಡು ಮತದಾರರ ಪಟ್ಟಿಗಳಿಗೆ ಆಕ್ಷೇಪಣೆಗಳು ಇದ್ದಲ್ಲಿ, ಆಕ್ಷೇಪಣೆಗಳನ್ನು ಸಮರ್ಥನೀಯ ದಾಖಲೆಗಳೊಂದಿಗೆ ಸಿಟಿ ಇನ್ಸ್‍ಟ್ಯೂಟ್ ವ್ಯವಸ್ಥಾಪಕರಿಗೆ ಅಥವಾ ಆಡಳಿತಾಧಿಕಾರಿಗಳಿಗೆ ಲಿಖಿತವಾಗಿ ಇದೇ ಅ.21ರ ಸಂಜೆ 5.30 ರೊಳಗೆ ಸಲ್ಲಿಸುವಂತೆ ಚಿತ್ರದುರ್ಗ ಸಿಟಿ ಇನ್ಸ್‍ಟ್ಯೂಟ್ ಆಡಳಿತಾಧಿಕಾರಿಗಳು ಸೂಚಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";