ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಫೋಕ್ಸೋ ಪ್ರಕರಣ ದಾಖಲಾಗಿದ್ದು ಮುಖ್ಯ ಸಾಕ್ಷಿ ವಿಚಾರಣೆಯಲ್ಲಿ ಸಂತ್ರಸ್ಥೆಯ ಕ್ರಾಸ್ ಎಕ್ಸಾಮಿನ್ ಮಾಡಲಾಯಿತು.
ಸಂತ್ರಸ್ಥೆಯರ ವಿಚಾರಣೆ ಸಂದರ್ಭದಲ್ಲಿ ಚಿತ್ರದುರ್ಗ ಕೋರ್ಟ್ ಗೆ ಮುರುಘಾಮಠ ಶಿವಮೂರ್ತಿ ಸ್ವಾಮಿ ಹಾಜರಿದ್ದರು.
ವಿಚಾರಣೆ ಬಳಿಕ ಜೈಲಿಂದ ಶರಣರನ್ನು ಬಿಡುಗಡೆಗೆ ಮಾಡಲು ನ್ಯಾಯಾದೀಶರು ಆದೇಶ ಮಾಡಿದರು. ಮುರುಘಾ ಶ್ರೀ ಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಸುಪ್ರೀಂ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಫೋಕ್ಸೋ ಆರೋಪಿ ಶರಣರು ಮತ್ತೆ ಜೈಲು ಸೇರಿದ್ದರು.
ಚಿತ್ರದುರ್ಗ 2 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಸಿ.ಗಂಗಾಧರ ಅವರು ಸ್ವಾಮೀಜಿಗಳ ಬಿಡುಗಡೆಗೆ ಆದೇಶ ಮಾಡಿದರು. ಚಿತ್ರದುರ್ಗ ಜಿಲ್ಲೆ ಪ್ರವೇಶ ನಿರ್ಬಂಧ ಹಾಕಿ ಹೈಕೋರ್ಟ್ ಜಾಮೀನು ನೀಡಿತ್ತು.
ಸುಪ್ರಿಂ ಕೋರ್ಟ್ ನ ನಿರ್ದೆಶನದಂತೆ 12 ಸಾಕ್ಷಿಗಳ ವಿಚಾರಣೆ ಬಳಿಕ ನ್ಯಾಯಾಧೀಶರು ಜಾಮೀನು ನೀಡಿ ಬಿಡುಗಡೆಗೆ ಆದೇಶ ಮಾಡಿದರು. ಚಿತ್ರದುರ್ಗ ಮುರುಘಾ ಶರಣರ ಜೈಲಿಂದ ಬಿಡುಗಡೆಗೆ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮುರುಘಾ ಶ್ರೀಗಳ ಪರ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿ
ಮುರುಘಾ ಶರಣರಿಗೆ ಹಿಂದೆ ಜಾಮೀನು ಮಂಜೂರು ಆಗಿತ್ತು. ಹೈಕೋರ್ಟ್ ಆದೇಶದ ವಿರುದ್ದ ಸುಪ್ರೀಂ ಕೋರ್ಟ್ ಗೆ ಸಂತ್ರಸ್ತ ಬಾಲಕಿರು ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಷರತ್ತಿನ ಮೇಲೆ ಜಾಮೀನು ರದ್ದು ಮಾಡಿತ್ತು. ಪ್ರಾಸಿಕ್ಯೂಷನ್ ಸಾಕ್ಷಿಗಳ ಪಟ್ಟಿ ಕೊಡಬೇಕು ಎಂದು ತಿಳಿಸಿತ್ತು. ಸಾಕ್ಷಿಗಳ ವಿಚಾರಣೆ ಮುಗಿದ ಬಳಿಕ ಜಾಮೀನು ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.
ಪ್ರಾಸಿಕ್ಯೂಷನ್ ಅವರು 13 ಜನ ಸಾಕ್ಷಿ ವಿಚಾರಣೆ ನಡೆಸಿದ್ದಾರೆ. ಇವತ್ತಿಗೆ ಎಲ್ಲಾ ಸಾಕ್ಷಿ ವಿಚಾರಣೆ ಮುಗಿದಿತ್ತು. ಹಿರಿಯ ವಕೀಲ ಸಿ.ವಿ.ನಾಗೇಶ್ ಕೋರ್ಟ್ ಗಮನಕ್ಕೆ ತಂದರು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಾಮೀನಿನ ಮೇಲೆ ಬಿಡಲು ಮನವಿ ಮಾಡಿದ್ದರು.
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕಾರಾಗೃಹಕ್ಕೆ ಜಿಲ್ಲಾ ಕೋರ್ಟ್ ಸೂಚನೆ ನೀಡಿ 4 ಗಂಟೆ ವೇಳೆಗೆ ಬಿಡುಗಡೆಯ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲು ತಿಳಿಸಿದ್ದು ಅದರಂತೆ ಎಲ್ಲ ಪ್ರಕ್ರಿಯೆಗಳು ಮುಗಿದು ಜೈಲಿನಿಂದ ಸ್ವಾಮೀಜಿಗಳು ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಪ್ರವೇಶಕ್ಕೆ ಹೈಕೋರ್ಟ್ ನಿರ್ಬಂಧ ಹೇರಿತ್ತು, ಆ ರೀತಿ ಶರಣರು ನಡೆದುಕೊಳ್ತಾರೆ ಎಂದು ತಿಳಿಸಿದರು.
ನಗನಗುತ್ತಲೇ ಹೊರ ಬಂದ ಶರಣರು-
ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾ ಶ್ರೀಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾಕಾರಾಗೃಹ ಮುಂಭಾಗ ಮುರುಘಾ ಶ್ರೀ ಬೆಂಬಲಿಗ ಭಕ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ಶರಣರು ಜೈಲಿಂದ ಬಿಡುಗಡೆಯಾಗಿ ನಗುತ್ತಲೇ ಹೊರ ಬಂದರು. ಶಿವಮೂರ್ತಿ ಮುರುಘಾ ಶರಣರ ಸ್ವಾಗತಕ್ಕೆ ಮುರುಘಾ ಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಸ್ವಾಮಿಜಿ ಆಗಮಿಸಿ ಕಾಯುತ್ತಿದ್ದರು. ಮುರುಘಾ ಶ್ರೀ ಹೊರ ಬರುತ್ತಿದ್ದಂತೆ ಬಸವ ಪ್ರಭು ಶ್ರೀಗಳು ಕಾಲಿಗೆ ಬಿದ್ದ ನಮಸ್ಕರಿಸಿದರು. ಮುರುಘಾ ಶ್ರೀ ಹೊರ ಬರುತ್ತಿದ್ದಂತೆ ಹಾರ ಹಾಕಿ ಜೈಕಾರ ಕೂಗಿದ ಭಕ್ತರು. ಮಠದ ಮರಿ ಸ್ವಾಮಿ ಬಸವಾಧಿತ್ಯ ದೇವರು ಇದ್ದರು.
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಮುರುಘಾ ಶ್ರೀಗಳು. ವಾಸ್ತವ್ಯ ಮಾಡಲಿದ್ದಾರೆ.
ಮುರುಘಾ ಶರಣರು ಹೇಳಿಕೆ-
ಜೈಲಿನಿಂದ ಬಿಡುಗಡೆಯಾದ ಬಳಿಕ ಮುರುಘಾ ಶರಣರು ಮಾಧ್ಯಮಗಳೊಂದಿಗೆ ಮಾತನಾಡಿ, ಬಸವೇಶ, ಮುರುಘೇಶನ ದಯೆಯಿಂದ ನಾವು ಹೊರ ಬಂದಿದ್ದೇವೆ. ನಾವೀಗ ದಾವಣಗೆರೆ ಶಿವಯೋಗ ಆಶ್ರಮಕ್ಕೆ ಹೊರಟಿದ್ದೇವೆ.
ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ. ಜೈಲಲ್ಲಿನ ಅನುಭವ ಹೇಳಲು ಇದು ಸಕಾಲ ಅಲ್ಲ, ಮೌನ ವಹಿಸುವ ಕಾಲ. ಕಾನೂನು ಹೋರಾಟ ನಡೆಯುತ್ತಿದೆ, ಸತ್ಯಕ್ಕೆ ಜಯ ಸಿಗುತ್ತದೆ. ಈಗಾಗಲೇ ಭಕ್ತರಿಗೆ ಹೇಳುವುದನ್ನ ಹೇಳಲಾಗಿದೆ ಎಂದು ತಿಳಿಸಿದರು.