Ad imageAd image

ಅಗಳು ಏರಿಯಾದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ಬೇಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ 3ನೇ ತಿರುವಿನ ಅಗಳು ಏರಿಯಾ (ಬಡಾವಣೆಯ) ಜನರಿಗೆ ಮೊಬೈಲ್ ಟವರ್ ರೆಡಿಯೆಷನ್ ಭಯ ಶುರುವಾಗಿದ್ದು ಯಾವುದೇ ಕಾರಣಕ್ಕೂ ಮೊಬೈಲ್ ಟವರ್ ಹಾಕಲು ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರು ಸೇರಿದಂತೆ ಸಂಬಂಧಿಸಿದ ಮತ್ತಿತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಅಗಳು ಏರಿಯಾದಲ್ಲಿ ಅವಿನಾಶ್ ತಂದೆ ಅಶೋಕ್ ಎನ್ನುವ ವ್ಯಕ್ತ ಇದೇ ಜಾಗದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವ ಪಣ ತೊಟ್ಟು ಈಗಾಗಲೇ ಗುಂಡಿ ತೋಡಿ ಹಾಗೇ ಬಿಟ್ಟಿದ್ದಾರೆ.

ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಆಮಿಷಗಳಿಗೆ ಒಳಗಾಗದಂತೆ ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕರ ಕೋರಿಕೆ ಧಿಕ್ಕರಿಸಿ ಮೊಬೈಲ್ ಟವರ್ ಹಾಕಲು ನಗರಸಭೆ ಅನುಮತಿ ನೀಡಿದ್ದೇ ಆದರೆ ಅಗಳು ಏರಿಯಾ ಜನರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಯವರಿಗೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳಿಗೆ ಸಾರ್ವಜನಿಕ ಮನವಿ ಸಲ್ಲಿಸಿ ಟವರ್ ನಿರ್ಮಿಸಬಾರದೆಂದು ಒತ್ತಾಯಿಸಿದ್ದರೂ  ಸಾರ್ವಜನಿಕರ ವಿರೋಧದ ನಡುವೆಯೂ ಅಗಳು ಏರಿಯಾ ಬಡಾವಣೆಯಲ್ಲಿ ಮೊಬೈಲ್‌ಟವರ್‌ನಿರ್ಮಿಸುವ ಯತ್ನ ನಡೆಯುತ್ತಿದೆ.

ಸಾರ್ವಜನಿಕರ ವಿರೋಧದ ನಡುವೆಯೂ ಟವರ್‌ನಿರ್ಮಿಸಲು ಯತ್ನಿಸುತ್ತಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಈಗಾಗಲೇ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಹಾಗೂ ಮೊಬೈಲ್‌ಟವರ್‌ಗಳಿಂದ ಹೊರಹೊಮ್ಮುವ ಕಿರಣಗಳಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವ ಸಂಭವನೀಯತೆ ಇದೆ.

ಈಗಾಗಲೇ ಈ ಪ್ರದೇಶದ ಸುತ್ತ ಮುತ್ತಲಿನಲ್ಲಿ ಮೊಬೈಲ್‌ಟವರ್‌ಗಳು ಕಾರ್ಯಾಚರಿಸುತ್ತಿದ್ದು, ಇನ್ನೊಂದು ಟವರನ್ನು ನಿರ್ಮಿಸಿದಲ್ಲಿ ಸಾರ್ವಜನಿಕರಲ್ಲಿ, ಹಿರಿಯ ನಾಗರಿಕರಲ್ಲಿ ಹಾಗೂ ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುವ ಸಂಭವನೀಯತೆ ಜಾಸ್ತಿ ಇದೆ ಎಂದು ನಿವಾಸಿಗಳು ತಮ್ಮ ಗೋಳು ಹೇಳಿಕೊಂಡಿದ್ದಾರೆ.

ಅಗಳು ಏರಿಯಾ ಜನ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರೋ ಮೊಬೈಲ್ ಟವರ್ ವಿರುದ್ಧ ಸಿಡಿದೆದ್ದಿದ್ದಾರೆ.
ಅಗಳು ಏರಿಯಾ ಬಡಾವಣೆ ಸುತ್ತಮುತ್ತ ನೂರಾರು ಕುಟುಂಬಗಳು ವಾಸ ಮಾಡ್ತಿವೆ. ಜೊತೆಯಲ್ಲಿ ನೂರಾರು ಮಕ್ಕಳ ಸಾರ್ವಜನಿಕ ಹಾಸ್ಟೆಲ್ ಇದೆ.

ಗರ್ಭಿಣಿಯರು, ಅಂಗವಿಕಲರು, ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುತ್ತಾರೆ. ಮೊಬೈಲ್ ಟವರ್ ಅಳವಡಿಕೆ ಮಾಡುವುದರಿಂದ ಕ್ಯಾನ್ಸರ್ ನಂತರ ಮಾರಕ ಕಾಯಿಗಳಿಗೆ ಬಲಿಯಾಗುವ ಸಾಧ್ಯತೆ ಇದೆ ಎಂದು ಅಕ್ಕ ಪಕ್ಕದ ಜನರು ದೂರು ನೀಡಿ ಮೊಬೈಲ್ ಟವರ್ ರೆಡಿಯೆಷನ್ ಭಯ ಶುರುವಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಮೊಬೈಲ್ ಟವರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರೋ ನಿವಾಸಿಗಳು ನಗರಸಭೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

 ಈ ಏರಿಯಾದಲ್ಲಿ 150 ಕ್ಕೂ ಹೆಚ್ಚು ಮನೆಯಿದ್ದು 500ಕ್ಕು ಹೆಚ್ಚು ಜನ ವಾಸ ಮಾಡ್ತಿದ್ದಾರೆ. ಇದೀಗ ಜನಸಂದಣಿ ಇರೋ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣದಿಂದ ಆತಂಕ ಮನೆ ಮಾಡಿದೆ.

ಟವರ್ ನ ರೆಡಿಯೆಷನ್ ನಿಂದ ಹಲವಾರು ಖಾಯಿಲೆಗಳು ಬಂದು, ಬ್ರೈನ್ ಡ್ಯಾಮೆಜ್ ನಂತಹ ಆರೋಗ್ಯ ಸಮಸ್ಯೆಗಳೂ ಕಾಡುವ ಭೀತಿಯಲ್ಲಿದ್ದಾರೆ. ಜೊತೆಗೆ ಹೆಚ್ಚು ವಯಸ್ಸಾಗಿರೋ ಮಂದಿ ಇಲ್ಲಿ ವಾಸವಿದ್ದು ಯಾವುದೇ ಕಾರಣಕ್ಕೂ ಇಲ್ಲಿ‌ ಮೊಬೈಲ್ ಟವರ್ ಬೇಡ ಅಂತಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಮೊಬೈಲ್ ಟವರ್ ನಿರ್ಮಾಣಕ್ಕೆ ತಡೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಬಡಾವಣೆ ಜನ ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಒಟ್ಟಾರೇ ಸಾರ್ವಜನಿಕರ ನೆಮ್ಮದಿ ಕಿತ್ತುಕೊಳ್ಳುವ ಹುನ್ನಾರ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

ಸಂತ್ರಸ್ತರಾದ ದೇವೇಂದ್ರಪ್ಪ, ಹೆಚ್.ರಾಮಮೂರ್ತಿ, ಕಮಲಮ್ಮ, ಕೆ.ಜಿ.ವೆಂಕಟೇಶ್, ಲೋಕೇಶ್, ಮಂಜಣ್ಣ, ಡಿ.ಜಿ.ಜೈತ್ರಾ, ರೇವತಿ, ನಹೀದಾ ಖಾನ್, ನಟರಾಜ್, ಕೋಮಲ, ಗಿರಿಜಾ, ಆರ್.ಸವಿತಾ, ಇಂದ್ರಮ್ಮ, ಟಿ.ಶಿಲ್ಪಾ, ಅಶೋಕ್ ಸೇರಿದಂತೆ ಇತರೆ ನೂರಾರು ಸಂತ್ರಸ್ತರು ಜಿಲ್ಲಾಧಿಕಾರಿಗಳು, ನಗಸಭೆ ಅಧಿಕಾರಿಗಳಿಗೆ ದೂರು ನೀಡಿ ಮನವಿ ಮಾಡಿದ್ದಾರೆ.

 

- Advertisement -  - Advertisement - 
Share This Article
error: Content is protected !!
";