ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಡಾ.ಮಮತ ಹೆಚ್.ಎ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ನಾಡಿನ ಖ್ಯಾತ ಸಾಹಿತಿ, ಆದರ್ಶ ಶಿಕ್ಷಕಿ, ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಎರಡು ಬಾರಿ ಕರ್ನಾಟಕ ಬುಕ್ ಆಪ್ ರೆಕಾರ್ಡ ಮತ್ತು ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಲಭಿಸಿರುವ, ಒನ್ ವರ್ಲ್ಡ್‌ಇಂಟರ್ನ್ಯಾಷನಲ್‌ಸ್ಕೂಲ್‌ನಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಾಹಿಸಿತ್ತಿರುವ  ಶ್ರೀಮತಿ ಡಾ.ಹೆಚ್.ಎ ಮಮತ ರವರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ದೊರೆತಿದೆ.

ವಿಶ್ವ ಕನ್ನಡ ವಾಗ್ವಿಲಾಸ ಕಲೆ-ಸಾಹಿತ್ಯ ಸಾಂಸ್ಕೃತಿಕ ಬಳಗ, ಚೆನ್ನಪಟ್ಟಣ  ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ, ಸಾಧನೆ ಮಾಡುತ್ತಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ವಿವಿಧ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಗಿಸಿ, ಪಾಲ್ಗೊಂಡು, ಶಾಲಾ ಮಕ್ಕಳಿಗಾಗಿ ೧ನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಾದರಿ ಪುಸ್ತಕಗಳು, ಹತ್ತನೆ ತರಗತಿಯ ಮಕ್ಕಳಿಗಾಗಿ ಪ್ರಶ್ನಕೋಠಿ, ಕವನಗಳುಕಾದಂಬರಿಗಳು, ಪ್ರವಾಸ ಕಥನ ,

ಕಥೆಗಳ ಸಂಗ್ರಹ ಹಾಗೂ ಮಂಗಳಮುಖಿಯ ಜೀವನ ಚರಿತ್ರೆ ಹೀಗೆ ಅನೇಕ ಪುಸ್ತಕಗಳನ್ನು ಬರೆದು  ಶಿಕ್ಷಣ ಸೇವೆ, ನಾಡು-ನುಡಿಗಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ. ಮಮತ ಹೆಚ್. ಎ ರವರ ಅಮೋಘ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡುತ್ತಿರುವುದಾಗಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಮಹಮದ್ ರಫಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ಅಕ್ಟೋಬರ್‌೬ ರಂದು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

- Advertisement -  - Advertisement -  - Advertisement - 
Share This Article
error: Content is protected !!
";