Ad imageAd image

ದುರ್ಗವನ್ನ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ- ನೆಲದ ಮಾತು1

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು  1-
ಯಾರಿಗಾದರು ಸರಿ, ದುರ್ಗವನ್ನ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ, ಕೋಟೆ ಎಂದರೆ ಮದಕರಿಯನ್ನ ನೆನಪಿಸುವ  ಅಬೇಧ್ಯ ಬುರುಜು, ಭತೇರಿ ಹಾಗೂ ಸಾಹಸ ಶೌರ್ಯ ಪರಾಕ್ರಮಗಳ ಮಹಾ ಸಂಗಮವೆಂದರೂ ಸರಿ.

 ಅಂದಿನ ಊರು ಈ ದಿನಕ್ಕೆ ಮತ್ತಷ್ಟು ಉದ್ದಗಲ ಹಿಗ್ಗಿ ಕಣ್ಣಳತೆಯ ದೂರಕ್ಕೂ ವಿಸ್ತರಿಸಿದೆ, ಹುಲ್ಲೂರು ಶ್ರೀನಿವಾಸಜೋಯಿಸರು ಲಕ್ಷ್ಮಣತೆಲಗಾವಿ ಇನ್ನೂ ಮುಂತಾದ ಮಹಾನ್ ಸಂಶೋದಕರ ನೆರವಿನಿಂದ, ಹಾಗೂ ತ ರಾ ಸುಬ್ಬರಾಯರು,ಬಿ ಎಲ್ ವೇಣುರವರು ಇನ್ನೂ ಮುಂತಾದ ಇತಿಹಾಸ ಕಾದಂಬರಿಕಾರರಿಂದ ಚಿತ್ರದುರ್ಗ ನಾಡಿನ ಜನತೆಗೆ ಯಾವ ಕಾಲಕ್ಕೂ ಚಿರಪರಿಚಿತವೇ.

 ಈ ಲೇಖಕರ (ಸರ್ಪಮತ್ಸರ) ನಾಗರಹಾವು, ಹಂಸಗೀತೆ, ಕಲ್ಲರಳಿ ಹೂವಾಗಿ ಕಾದಂಬರಿಗಳು ಚಲನ ಚಿತ್ರಗಳಾಗಿ ದೇಶವ್ಯಾಪಿ ಪ್ರದರ್ಶನ ಕಂಡು ದುರ್ಗದ ಹಿರಿಮೆಯನ್ನ ಹೆಚ್ಚಿಸಿವೆ, ಇಲ್ಲಿ ನಾಯಕ ಸಂತತಿಯವರಷ್ಟೇ ಅಲ್ಲ,ಕದಂಬರು, ಹೋಯ್ಸಳರು, ರಾಷ್ಟ್ರಕೂಟರು, ವಿಜಯನಗರ ಅರಸರ ಆಳ್ವಿಕೆಯ ಕುರುಹುಗಳು ಸಹ ಕಾಣ ಸಿಗುತ್ತವೆ,ಹಾಗೆಯೇ ಇನ್ನೊಂದು ವಿಶೇಷವೆಂದರೆ ದುರ್ಗದ ಪಾಳೇಗಾರರು ಅರಸರೇನಲ್ಲ ಸಾಮಂತರೇ.

ಆದರೆ ಇವರ ಆಳ್ವಿಕೆಯ ಮೇಲೆ ರಚಿತವಾಗಿರುವ ಕಾದಂಬರಿಗಳು ಭಾರತದ ಇತಿಹಾಸದಲ್ಲಿ ಯಾವ ಅರಸರು,ಚಕ್ರವರ್ತಿಗಳ ಮೇಲೂ ರಚಿತವಾಗಿಲ್ಲ,ಅಷ್ಟು ಕಾದಂಬರಿಗಳು ಇವರ ವೀರೋಚಿತ,ಸಮಾಜಮುಖಿ ಬದುಕನ್ನಾಧರಿಸಿ ರಚಿತಗೊಂಡಿವೆ.

ಇಲ್ಲಿರುವಷ್ಟು ಐತಿಹಾಸಿಕ ಕುರುಹುಗಳು ಬೇರೆಲ್ಲೂ ಕಂಡು ಬರುವುದಿಲ್ಲವೇನೋ ಅನ್ನುವಷ್ಟಿವೆ,ದುರಂತವೆಂದರೆ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಮಲತಾಯಿ ದೋರಣೆಯಲ್ಲಿಯೇ ಕುಂಟುತ್ತ ಸಾಗಿದೆ.

ಮೊನ್ನೆ ಹೆಸರಿಸಿದ ರಾಜ್ಯದ ಏಳು ಅಧ್ಬುತಗಳ ಸಾಲಿನಲ್ಲಿ ದುರ್ಗವನ್ನು ಗುರುತಿಸದೇ ಇರುವುದು ಅತ್ಯಂತ ನೋವಿನ ಸಂಗತಿ(ಮುಂದೆ)
ಲೇಖನ-ಕುಮಾರ್ ಬಡಪ್ಪ

 

- Advertisement -  - Advertisement - 
Share This Article
error: Content is protected !!
";