ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿ.ಕೆ. ಶಿವಕುಮಾರ್‌ಅವರೇ ಚನ್ನಪಟ್ಟಣ ಉಪಚುನಾವಣೆ ಘೋಷಣೆಗೆ ಮೊದಲೇ ಅಲ್ಲಿನ ಜನರಿಗೆ ಸೈಟು, ಮನೆ, ರಸ್ತೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಿದ್ದೀರಲ್ಲ ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದೆ.
ನಿಮ್ಮನ್ನು ಗೆಲ್ಲಿಸಿದ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರ ಗೋಳು ಡಿ.ಕೆ ಶಿವಕುಮಾರ್ ನಿಮಗೆ ಕಾಣಿಸುತ್ತಿಲ್ಲವೇ…?
ಕನಕಪುರದ ಬರಡನ ಹಳ್ಳಿಯ ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ಇನ್ನೆಷ್ಟು ದಿನ ಬೇಕು..? ಎಂದು ಖಾರವಾಗಿ ಜೆಡಿಎಸ್ ಪ್ರಶ್ನಿಸಿದೆ.
ಉಪಮುಖ್ಯಮಂತ್ರಿಯಾಗಿರುವ ನೀವು ಕನಕಪುರ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ದ್ವೇಷ ರಾಜಕಾರಣದಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು ಮತ ಹಾಕಿದವರ ಸಂಕಷ್ಟಗಳನ್ನು ಬಗೆಹರಿಸಿ ಎಂದು ಜೆಡಿಎಸ್ ಪಕ್ಷ ತಾಕೀತು ಮಾಡಿದೆ.