ಜಾಗತಿಕ ಶಾಂತಿ ಪ್ರಶಸ್ತಿಗೆ ಭಾಜನರಾದ ಉಪನ್ಯಾಸಕ ಟಿ.ವಿ.ನಾಗರಾಜ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಶ್ರೀರಂಗನಾಥ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಹೆಸರಾಂತ ಬರಹಗಾರ ಟಿ.ವಿ.ನಾಗರಾಜ್ ಅವರು ಭಾರತ ಸರ್ಕಾರದ ನೀತಿ ಆಯೋಗ ಮತ್ತು ಯೂರೋಪಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಡೆವಲಪ್ಮೆಂಟ್ ಸಹಯೋಗದೊಂದಿಗೆ ನೀಡುವ 2024ನೇ ಸಾಲಿನ ” ರವೀಂದ್ರನಾಥ ಠಾಗೋರ್  ಜಾಗತಿಕ ಶಾಂತಿ “ಪ್ರಶಸ್ತಿಗೆ ಭಾಜನರಾಗಿದ್ದಾರೆ.

- Advertisement - 

ಇವರು ಕಳೆದ ಇಪ್ಪತ್ತು ವರ್ಷಗಳಿಂದ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಶ್ರೀ ರಂಗನಾಥ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement - 

ಇವರ   ನಿಸ್ವಾರ್ಥ ಸೇವೆಯನ್ನು ಗುರುತಿಸಿ  ಹಾಗೂ  ಕನ್ನಡ ಸಾಹಿತ್ಯ ರಚನೆಯ ಮೂಲಕ ತಮ್ಮದೇ ಓದುಗರ ಬಳಗವನ್ನು ಹೊಂದಿದ ಇವರಿಗೆ  ಈ ಸಾಲಿನ ” ರವೀಂದ್ರನಾಥ ಠಾಗೋರ್  ಜಾಗತಿಕ ಶಾಂತಿ ” ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

 

- Advertisement - 

 

Share This Article
error: Content is protected !!
";