ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ಪೊಲೀಸರು ಪಿಜಿ, ವಿದ್ಯಾರ್ಥಿಗಳ ರೂಂಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳರ ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ.
ಕುಮಾರಸ್ವಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಕಳ್ಳರನ್ನು ಬಂಧಿಸಿದ್ದಾರೆ. ಬೆಳಗ್ಗೆ ಎದ್ದು ನಾವೆಲ್ಲಾ ಕೆಲಸಕ್ಕೆ ಹೋದಂತೆ ಇವರು ಪಿಜಿಗಳಲ್ಲಿ ಕಳ್ಳತನ ಮಾಡಲು ಹೊರಡುತ್ತಿದ್ದರು.
ಪಿಜಿಗಳಲ್ಲಿ ಕದಿಯಲು ಸಾಧ್ಯವಾಗದೆ ಇದ್ದರೆ ಬ್ಯಾಚುಲರ್ ರೂಂಗಳನ್ನು ಹುಡುಕುತ್ತಿದ್ದರು. ಬ್ಯಾಚುಲರ್ಸ್ ಗಳು ರೂಂ ಕೀ ಗಳನ್ನು ಸಮೀಪದ ಪಾಟ್ ಅಥವಾ ಮ್ಯಾಟ್ ಕೆಳಗೆ ಇಡುತ್ತಿದ್ದನ್ನು ಗಮನಿಸಿ ಆ ರೂಂಗೆ ಕನ್ನ ಹಾಕುತ್ತಿದ್ದರು.
ಹೀಗೆ ಲ್ಯಾಪ್ ಟ್ಯಾಪ್, ಮೊಬೈಲ್‌ಗಳನ್ನೇ ಟಾರ್ಗೆಟ್‌ಮಾಡುತ್ತಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿ ಆರೋಪಿಗಳ ಬಳಿ ಇದ್ದು 23 ಲಕ್ಷ ಮೌಲ್ಯದ 28 ಮೊಬೈಲ್‌ಗಳು, 34 ಲ್ಯಾಪ್ ಟ್ಯಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.