ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ರೈತ ಸಂಘದ ಪ್ರತಿಭಟನೆ 

News Desk

ಚಂದ್ರವಳ್ಳಿ ನ್ಯೂಸ್, ಹರಿಹರ :
ವಾಸುದೇವ ಮೇಟಿ ರಾಜ್ಯಾಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹರಿಹರ ತಾಲೂಕು ಸಮಿತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಬೆಳಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

   ಮುಖ್ಯವಾಗಿ ಹರಿಹರ-ಕೊಟ್ಟೂರು ರೈಲು ಮಾರ್ಗದ ಅಕ್ಕಪಕ್ಕದ ಜಮೀನುಗಳಿಗೆ ಓಡಾಡಲು ರಸ್ತೆ ಇಲ್ಲದ ಕಾರಣ ಕೃಷಿ ಚಟುವಟಿಕೆ ಗಳನ್ನು ಸುಲಲಿತವಾಗಿ ನಡೆಸಿಕೊಂಡು ಹೋಗಲು ರಸ್ತೆ ನಿರ್ಮಾಣ ಮಾಡಿಕೊಡಬೇಕು.

   ತಾಲೂಕಿನ ಸಾರಥಿ-ಕುರುಬರಹಳ್ಳಿ ಗ್ರಾಮದಲ್ಲಿ ರೈತರ ಸುಮಾರು 600 ಎಕರೆ ಜಮೀನನ್ನು ಕೆಐಎಡಿಬಿ ಯೋಜನೆಗೆ ಭೂಸ್ವಾಧೀನ ಗೊಳಿಸಿದ್ದು ಸರಿಯಷ್ಟೆ, ಆದರೆ ಇಲ್ಲಿಯವರೆಗೆ ಯಾವುದೇ ಕಾರ್ಖಾನೆಗಳು ಅನುಷ್ಠಾನಗೊಳ್ಳದೇ ಸದರಿ ಜಮೀನು ಖಾಲಿ ಇರುವುದರಿಂದ ಸದರಿ ಜಮೀನಿನಲ್ಲಿ ರೈತ ಮತ್ತು ಕೂಲಿ ಕಾರ್ಮಿಕ ಮಕ್ಕಳಿಗೆ ಉದ್ಯೋಗ ನಿರ್ಮಾಣ ಮಾಡಿಕೊಡಬೇಕು.

    ತಾಲೂಕು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಕೃಷಿ ಉಪಕರಣಗಳಿಗೆ ಸಲ್ಲಿಸಿದ ಅರ್ಜಿಗಳನ್ನು ತ್ವರಿತ ರೀತಿಯಲ್ಲಿ ವಿಲೆವಾರಿ ಮಾಡಬೇಕು. ಅದೇ ರೀತಿ ಅವಶ್ಯಕತೆ ಇರುವವರಿಗೆ ಮಾತ್ರ ಕೃಷಿ ಉಪಕರಣಗಳನ್ನು ವಿತರಿಸಬೇಕೆಂದು ಮನವಿ.ರೈತರ ಜಮೀನುಗಳಲ್ಲಿ ಅಳವಡಿಸಿದ ಪಂಪ್‌ಸೆಟ್‌ಗಳಿಗೆ ಮೊದಲಿನಂತೆ ಉಚಿತ ವಿದ್ಯುತ್ ಪರಿಕರಗಳನ್ನು ವಿತರಿಸಬೇಕು.

    ರೈತರು ವರ್ಷಪೂರ್ತಿ ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಕಾನೂನಾತ್ಮಕವಾಗಿ ವೈಜ್ಞಾನಿಕ ಬೆಲೆ ನಿಗದಿಪಡಿಸ ಬೇಕು.ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡಿಯ ಬೇಕು.ದುಗ್ಗಾವತಿಯಿಂದ ಹೊಟ್ಟೆಗಾನಹಳ್ಳಿ ಗ್ರಾಮಕ್ಕೆ ಸಂಪರ್ಕಿಸು ವ ರಸ್ತೆಯನ್ನು ಸರಿಪಡಿಸಿ ಹೊಟ್ಟಿಗಾನಹಳ್ಳಿ ಗ್ರಾಮಸ್ಥರಿಗೆ ಉತ್ತಮ ಸಂಪರ್ಕ ರಸ್ತೆಯನ್ನು ಸರಿಪಡಿಸಿ ಕೊಡಬೇಕು.

    ಮೊದಲಾದ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ ಗುಮ್ಮ ನೂರು ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಚಿಕ್ಕ ಬೂದಿಹಾಳು ಭಗತ್ ಸಿಂಗ್, ಹರಿಹರ ತಾಲೂಕ ಅಧ್ಯಕ್ಷ ಹೊಟ್ಟಿಗಾನಹಳ್ಳಿ ಸುನಿಲ್, ಗೌರವಾಧ್ಯಕ್ಷ ಸಿ.ಹನುಮಂತಪ್ಪ, ತಾಲೂಕ ಕಾರ್ಯದರ್ಶಿ ಹಿರೇಬಿದರಿ ನಾಗರಾಜ್, ಹೋಬಳಿ ಮಟ್ಟದ ಕಾರ್ಯದರ್ಶಿ ಸುನಿಲ್ ಬುಳ್ಳಾಪುರ,

ದಾವಣಗೆರೆ ತಾಲೂಕ ಅಧ್ಯಕ್ಷ ಕೆಂಚಮ್ಮನ ಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷ ಕಿತ್ತೂರ್ ಹನುಮಂತಪ್ಪ, ಜಗಳೂರು ತಾಲೂಕು ಕಾರ್ಯದರ್ಶಿ ಬಿ.ಕುಮಾರ್, ಜಿಲ್ಲಾ ಕಾರ್ಯದರ್ಶಿ ಕೋಲುಕುಂಟೆ ಹುಚ್ಚಂಗಪ್ಪ, ಹೋಬಳಿ ಘಟಕದ ಅಧ್ಯಕ್ಷ ಚಿಕ್ಕ ತುಗಲೇರಿ ಮಲ್ಲಿಕಪ್ಪ ಸೇರಿದಂತೆ ತಾಲೂಕಿನ ನೂರಾರು ರೈತ ಬಾಂಧವರು ಭಾಗವಹಿಸಲಿದ್ದಾರೆ. ತಾಲೂಕಿನ ಎಲ್ಲಾ ರೈತ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿ ಕೊಡಬೇಕು ಎಂದು ಹರಿಹರ ತಾಲೂಕು ಸಮಿತಿ ಅಧ್ಯಕ್ಷ ಹೊಟ್ಟೆಗಾನಹಳ್ಳಿ ಸುನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";