ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರ ನಗರಸಭೆಗೆ ನೂತನ ಅಧ್ಯಕ್ಷರಾಗಿ ಸುಮಿತ್ರಾ ಆನಂದ್–ಉಪಾಧ್ಯಕ್ಷರಾಗಿ ಮಲ್ಲೇಶ್ ಆಯ್ಕೆಯಾಗಿದ್ದು ನಗರಸಭೆ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅಧಿಕಾರದಲ್ಲಿದ್ದು, ಬಿಜೆಪಿ ಪಕ್ಷ ಅಧ್ಯಕ್ಷ ಸ್ಥಾನ ಮತ್ತು ಜೆಡಿಎಸ್ ಪಕ್ಷ ಉಪಾಧ್ಯಕ್ಷ ಸ್ಥಾನ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನ ಹಂಚಿಕೆ ಮಾಡಿಕೊಂಡಿದ್ದು ಎರಡನೇ ಅವಧಿಯ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು,
ಸೆಪ್ಟೆಂಬರ್ 23ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ಶ್ರೀಮತಿ ಸುಮಿತ್ರಾ ಆನಂದ್ ಅಧ್ಯಕ್ಷರಾಗಿ, ಹಾಗು ಜೆಡಿಎಸ್ ಸದಸ್ಯ ರೈಲ್ವೇ ಸ್ಟೇಷನ್ ಮಲ್ಲೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಆಧ್ಯಕ್ಷ ಹಾಗು ಉಪಾಧ್ಯಕ್ಷರ ಬಿಜೆಪಿ ಜೆಡಿಎಸ್ ಎರಡು ಪಕ್ಷದ ಮುಖಂಡರ ಸಮ್ಮುಖದಲ್ಲಿ ಪದಗ್ರಹಣ ನೆರ ವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಶಾಸಕ ದೀರಜ್ ಮುನಿರಾಜು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹರೀಶ್ ಗೌಡ ನಗರಸಭೆ ಮಾಜಿ ಅಧ್ಯಕ್ಷ ತಾ ನಾ ಪ್ರಭುದೇವ್, ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ಜೆಡಿಎಸ್ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣ ಶಾಂತಿನಗರ ಪ್ರವೀಣ್ ಕುಮಾರ್ ತಳವಾರ ನಾಗರಾಜ ಹಾಗು ಜೆಡಿಎಸ್ ಬಿಜೆಪಿ ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು.