ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾಗಿ ಕರಿಕೆರೆ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಸಭೆಯನ್ನು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು.

ಈ ಸಭೆಗೆ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿಯವರು ಹಾಗೂ ಚುನಾವಣಾ ಅಧಿಕಾರಿಗಳಾಗಿ ರಾಜ್ಯ ಕಾರ್ಯಕಾರಿಣಿ.ಶಾಂತಪ್ಪ ಗೌಡ ಭಾಗವಹಿಸಿದ್ದರು.

ನೂತನ ಜಿಲ್ಲಾಧ್ಯಕ್ಷರಾಗಿ ಕರಿಕೆರೆ ತಿಪ್ಪೇಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಕಾತ್ರಿಕೇನಹಳ್ಳಿ, ಉಪಾಧ್ಯಕ್ಷರಾಗಿ ಹನುಮಂತಪ್ಪ ನಾಗತಿಹಳ್ಳಿ, ಸುಬ್ರಮಣಿ ಲಕ್ಕವ್ವನಹಳ್ಳಿ, ಕೋಶಾಧ್ಯಕ್ಷರಾಗಿ ಏಕಾಂತ್ ಹಿರೇಮದುರೆ, ಮಹಿಳಾ ಪ್ರಮುಖ್ ರಾಗಿ ರಮ್ಯ ಲಕ್ಕವ್ವನಹಳ್ಳಿ ಹಾಗೂ

ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾಗಿ ಪಂಚಾಕ್ಷರಿ ಸ್ವಾಮಿ ನಾಯಕನಹಟ್ಟಿ, ತಿಪ್ಪೇಸ್ವಾಮಿ ಬೊಂಬೇರಹಳ್ಳಿ, ಜ್ಞಾನೇಶ್ವರ ದೊಡ್ಡಸಿದ್ದವ್ವನಹಳ್ಳಿ, ಪುಟ್ಟರಾಜು ಕಾತ್ರಿಕೇನಹಳ್ಳಿ, ವೆಂಕಟೇಶ್ ರೆಡ್ಡಿ ರಾಮಜೋಗಿಹಳ್ಳಿ, ಅಭಿನಯ್ ಮೀರಾಸಾಭಿಹಳ್ಳಿ, ಪುಟ್ಟರಾಜಣ್ಣ ಹೊಸದುರ್ಗ, ವೀರೇಶ್ ಚಿತ್ರದುರ್ಗ, ಕೃಷ್ಣಾರೆಡ್ಡಿ ಹೊನ್ನೂರು, ಸುರೇಶ್ ಹೊಳಲ್ಕೆರೆ, ಚಿದಾನಂದ ಹೊಳಲ್ಕೆರೆ,  ಹೆಚ್.ಪೆದ್ದಣ್ಣ ಕಾಮಸಮುದ್ರ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಹೊಳಲ್ಕೆರೆ ತಾಲ್ಲೂಕಿನ ಅಧ್ಯಕ್ಷರಾಗಿ ಸುರೇಶಣ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಚಿದಾನಂದ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಆಯ್ಕೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿ ಸಹಕರಿಸಿದ ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮ ಸಮಿತಿಗಳ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ತಿಳಿಸಿದ್ದಾರೆ.

 

 

 

 

- Advertisement -  - Advertisement -  - Advertisement - 
Share This Article
error: Content is protected !!
";