ಸಭೆ ಸೇರುವುದು, ಡಿನ್ನರ್ ಪಾರ್ಟಿ ಮಾಡುವುದಕ್ಕೆ ಬ್ರೇಕ್, ಸಂಪುಟ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ರಾಜ್ಯ ಕಾಂಗ್ರೆಸ್‌ಉಸ್ತುವಾರಿ ಸಚಿವ ಸುರ್ಜೆವಾಲಾ ಅವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಾತಮಾಡಿದ ಅವರು, ನನ್ನ ಮತ್ತು ಶಿವಕುಮಾರ್‌ಇಬ್ಬರೊಟ್ಟಿಗೂ ಕೆ.ಸಿ ವೇಣುಗೋಪಾಲ್ ಮಾತನಾಡಿದ್ದಾರೆ. ಇನ್ನು ಮುಂದೆ ನೀವ್ಯಾರು ಸಭೆ ಸೇರುವುದು, ಮಾತನಾಡುವುದು, ಮಾಡಬಾರದು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ನೀವೆ ಜವಾಬ್ದಾರರು ಎಂದು ಸಿಎಂ ಎಚ್ಚರಿಸಿದ್ದಾರೆ.

ಯಾವ ಸಚಿವರು ಗುಂಪು ಗುಂಪಾಗಿ ಸಭೆ ಮಾಡುತ್ತಾರೆ? ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ ಅವರಿಗೆ ನೋಟಿಸ್ ನೀಡಿ ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೆ ಸಚಿವ ಸ್ಥಾನದಿಂದ ವಜಾ ಮಾಡಿ ಎನ್ನುವ ಸಂದೇಶ ನೀಡಿದ್ದಾರೆ ಎಂದು ಎಚ್ಚರಿಸಿದರು.

ಕೆ.ಸಿ ವೇಣುಗೋಪಾಲ್‌ಹಾಗೂ ಸುರ್ಜೆವಾಲ ಇಬ್ಬರೂ ನನ್ನ ಗಮನಕ್ಕೆ ತಂದಿದ್ದಾರೆ. ನಿಮ್ಮ ಸಭೆ, ನಿಮ್ಮ ಮಾತು, ನಿಮ್ಮ ಜವಾಬ್ದಾರಿ. ಈ ವಿಚಾರದಲ್ಲಿ ಯಾವುದೂ ನನ್ನ ಕೈಯಲ್ಲಿ ಇಲ್ಲ ಎಂದು ಸಿಎಂ ಕಡ್ಡಿ ಮುರಿದಂತೆ ಸಚಿವರುಗಳಿಗೆ ಎಚ್ಚರಿಸಿದ್ದಾರೆ.

ಇದಕ್ಕೂ ಮುನ್ನ ಸಂಪುಟ ಸಭೆ ಆರಂಭವಾಗುತ್ತಿದ್ದಂತೆ ಮೊದಲಿಗೆ ಸಚಿವರ ಸಭೆ ಬಗ್ಗೆ ಸಿಎಂ ಮಾತು ಆರಂಭಿಸಿದರು. ಈ ವೇಳೆ ಮಾಜಿ ಸ್ಪೀಕರ್‌ಕೆ.ಬಿ ಕೋಳಿವಾಡ ಅವರ ಮಾತಿನ ಬಗ್ಗೆ ಅವರ ಮಗ ಶಾಸಕ ಪ್ರಕಾಶ್ ಕೋಳಿವಾಡ ಕ್ಷಮೆ ಕೇಳಿದರು ಎನ್ನಲಾಗಿದೆ.

ಬಳಿಕ ಸಿಎಂ ಅದು ಮುಗಿದ ಅಧ್ಯಾಯ, ಆದರೆ ಸಚಿವರು ನೀವೇ ಮಾತಾನಾಡಿದರೆ ಹೇಗೆ? ಎಂದು ಸಿಎಂ ಪ್ರಶ್ನೆ ಮಾಡಿದರು. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸಚಿವ ಮಹಾದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೋಳಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

ಇಲಾಖೆ ವಿಚಾರಕ್ಕೆ ಭೇಟಿ ಮಾಡಿದ್ದು ಅದು ಮಾಧ್ಯಮಗಳಲ್ಲಿ ಆ ರೀತಿ ಸುದ್ದಿ ಆಗಿದೆ ಅಷ್ಟೆ. ಮೈಸೂರಲ್ಲಿ ಎಲ್ಲರನ್ನೂ ನಾನೇ ಊಟಕ್ಕೆ ಕರೆದೆ ಅದಕ್ಕೆ ಎಲ್ಲರೂ ಸೇರಿದ್ದೆವು ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಏನೇ ಇರಲಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಸಲಹೆ ನೀಡಿದರು ಎನ್ನಲಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";