ತುಮಕೂರಿನಲ್ಲಿ ಇದೇ ಶನಿವಾರ ಜೀ಼ ಕನ್ನಡದ ಸರಿಗಮಪ ಆಡಿಷನ್

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು  ನಿಮ್ಮೂರಿಗೂ ಬರ್ತಿದೆ  ಸರಿಗಮಪ ಆಡಿಷನ್,ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಕನ್ನಡದ ನಂ 1ವಾಹಿನಿ ಜೀ಼ ಕನ್ನಡ,ಈಗ ಮತ್ತೊಮ್ಮೆ ಸರಿಗಮಪ ರಿಯಾಲಿಟಿ ಶೋ ಮೂಲಕ ಕರುನಾಡಿನ ಹಾಡುಗರನ್ನ ಹುಡುಕುವ ಕೆಲಸ ಶುರುಮಾಡಿದೆ.

ಜೀ಼ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್,ಕಾಮಿಡಿ ಕಿಲಾಡಿಗಳು,ಡಿಕೆಡಿ ಮತ್ತು ಮಹಾನಟಿ ಮೂಲಕ ಈಗಾಗಲೆ ಸಾಕಷ್ಟು ನಟ-ನಟಿಯರು ,ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್ ಗಳನ್ನ  ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಸರಿಗಮಪ ಶೋ ಮೂಲಕ ನಿಮ್ಮೂರಿನಲ್ಲಿರುವ ಗಾಯಕ- ಗಾಯಕಿಯಾಗುವ ಕನಸು ಹೊತ್ತಿರುವ,ಪ್ರತಿಭೆಗಳಿಗೆ ವೇದಿಕೆಯಾಗಲು ಬಂದಿದೆ.

ಕಳೆದ ಬಾರಿ ವಿದೇಶಿ ಕನ್ನಡಿಗ ಪ್ರತಿಭೆಗಳೊಂದಿಗೆ ಕನ್ನಡದ ಕಂಪನ್ನ ಜಗತ್ತಿಗೆ ಬಿತ್ತರಿಸಿ ಸರಿಗಮಪ ಈ ಬಾರಿ 6 ರಿಂದ 60 ವಯಸ್ಸಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಜ್ಜಾಗಿದೆ.

ಈ ಮೂಲಕ ಕನ್ನಡದ ಸಂಗೀತ ಮತ್ತು ಚಿತ್ರರಂಗಕ್ಕೆ ಭರವಸೆಯ ಗಾಯಕ-ಗಾಯಕಿಯರನ್ನ  ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ.ಸರಿಗಮಪ ಶೋ ಮೂಲಕ ಹಲವಾರು ಪ್ರತಿಭೆಗಳು ಹೊರಹೊಮ್ಮಿ ಇಂದು ಸಂಗೀತ ಲೋಕದ ಸಾಧಕರ ಸಾಲಿಗೆ ಸೇರಿದ್ದಾರೆ, ನಿಮ್ಮ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ನಿಮ್ಮೂರಿಗೆ ಬಂದು,ನಿಮ್ಮ ಪ್ರತಿಭಯೆನ್ನ ಗುರುತಿಸಿ ನಿಮ್ಮನ್ನ ಈ ವೇದಿಕೆ ಕರೆತರುವ ಕೆಲಸವನ್ನ ಈ ಮೂಲಕ ಮಾಡಲಿದೆ.

ಸರಿಗಮಪ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು ,ಇದರ ಆರಂಭಿಕ ಹಂತವೆಂಬಂತೆ ಅಕ್ಟೋಬರ್12 ಇದೇ ಶನಿವಾರ ಬೆಳಗ್ಗೆ 9 ಗಂಟೆಗೆ,ಸೇಂಟ್ ಮೋಸಸ್ ಆಂಗ್ಲಶಾಲೆ,ಆದರ್ಶನಗರ,TUDA ಆಫೀಸ್ ಹತ್ತಿರ,ಬೆಳಗುಂಬ ರಸ್ತೆ,ತುಮಕೂರು.

ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು.ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಪಾಸ್ಪೋರ್ಟ್ ಸೈಜ್ ಪೋಟೋ ಜೊತೆ ಅಡ್ರಸ್ ಪ್ರೂಫ್ ಜೆರಾಕ್ಸ್ ತೆಗೆದುಕೊಂಡು ಬಂದು ಭಾಗವಹಿಸಬಹುದಾಗಿದೆ. ಜೀ಼ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.

- Advertisement -  - Advertisement - 
Share This Article
error: Content is protected !!
";