ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಜುಲೈ ತಿಂಗಳ 9ರಂದು ತಾಲೂಕಿನ ಹಿರೇಹಳ್ಳಿ ಗ್ರಾಮದ ಹೊರ ವಲಯದಲ್ಲಿ ಒಂಟಿ ಮನೆಯ ಬಾಗಿಲು ಮುರಿದು ಕಳ್ಳರು ಮನೆಯ ಯಜಮಾನಿಗೆ ಚಾಕುವಿನಿಂದ ಎದುರಿಸಿ ಕೈಗಳನ್ನ ಕಟ್ಟಿ ಮನೆಯಲ್ಲಿದ್ದ ೬,೫೨,೫೦೦ ನಗದು ಹಣ ಮತ್ತು ಚಿನ್ನ ಆಭರಣಗಳನ್ನ ದೋಚಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ.ರಾಜಣ್ಣ ನೇತೃತ್ವದಲ್ಲಿ ತಳಕು ಪೊಲೀಸ್ ಠಾಣಾ ಪಿಎಸ್ಐ ಲೋಕೇಶ್ ಹಾಗೂ ಶಿವಕುಮಾರ್, ಸಿಬ್ಬಂದಿಗಳ ಸಹಕಾರದಲ್ಲಿ ಒಂಟಿ ಮನೆ ದರೋಡೆ ಮಾಡಿ ತಲೆ ತಪ್ಪಿಸಿಕೊಂಡಿದ್ದ
ದರೋಡೆಕೋರರಾದ ಆಂದ್ರಪ್ರದೇಶ ಅನಂತಪುರ ಜಿಲ್ಲೆಯ ರುದ್ರಂಪೇಟೆ ಎನ್ ಜಿ ಓ ಕಾಲೋನಿಯ ನೀಲಂ ಶ್ರೀರಾಮ್ ವಿಜಯ್, ವಿಜಯವಾಡದ ರಂಗುಲ ಪ್ರಸಾದ್ ಎನ್ನುವ ಇಬ್ಬರು ದರೋಡೆಕೋರರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದು ದರೋಡೆಯಲ್ಲಿ ನಾಯಕತ್ವ ವಹಿಸಿದ ಪಾಲವೆಂಕಟೇಶರಾವ್ ತಲೆ ತಪ್ಪಿಸಿಕೊಂಡಿದ್ದಾನೆ.
ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಅವರಿಂದ ಕೃತ್ಯಕ್ಕೆ ಬಳಸಿದ್ದ ಸಿಸಿ ಕ್ಯಾಮೆರಾ, ಮಂಕಿಕ್ಯಾಪ್, ಚಾಕುಗಳು, ಟಾರ್ಚ್ಗಳು, ಕಟರ್ ಮೊಲ ಹಿಡಿಯುವ ಬಲೆ, ಪ್ಲಾಸ್ಟಿಕ್ ಹಾಗೂ ಮೊಬೈಲ್ ಇವುಗಳನ್ನ ವಶಕ ಪಡೆದಿದ್ದು ನ್ಯಾಯಾಲಯದ ಮುಂದೆ ಹಾಜರಿ ಪಡಿಸಲಾಗಿದೆ.