ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಪಕ್ಷಕ್ಕೆ ಸೇರಿದಾಕ್ಷಣ ಯಾವುದೇ ಹುದ್ದೆ ಸಿಗುವುದಿಲ್ಲ. ಮೊದಲು ಪಕ್ಷಕ್ಕೆ ದುಡಿಯಬೇಕು ನಂತರ ಹುದ್ದೆಗಳು ಸಿಗುತ್ತವೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಗಣೇಶ್ ಮೂರ್ತಿ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರುಗಳ ತಪ್ಪು ನಿರ್ದಾರದಿಂದ ತಾಲೂಕಿನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ.
ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿ ಚುನಾವಣೆ ವೇಳೆ ತಾಲೂಕಿನಲ್ಲಿ ಸಂಘಟನೆ ಮಾಡುವುದಾಗಿ ಹೇಳಿ ಓಡಾಡಿದರು. ಆದರೆ ತಾಲೂಕಿನ ಜನ ಅವರನ್ನು ಒಪ್ಪಲಿಲ್ಲ. ಚುನಾವಣೆ ಮುಗಿಯುತ್ತದ್ದಂತೆ ಕಣ್ಮರೆಯಾಗಿದ್ದಾರೆ. ಈ ರೀತಿ ಆದರೆ ಪಕ್ಷ ಸಂಘಟನೆ ಸಾದ್ಯವಿಲ್ಲ ಎಂದರು.
ನಾನೇನು ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡವನಲ್ಲ. ನನಗಿಂತ ಉತ್ತಮರಾದವರು ಯಾರಾದರೂ ಹುದ್ದೆ ಸ್ವೀಕರಿಸಲು ಮುಂದೆ ಬಂದರೆ ಖಂಡಿತ ಬಿಟ್ಟುಕೊಡಲು ಸಿದ್ದನಿದ್ದೇನೆ. ಪಕ್ಷಕ್ಕೆ ಸದಸ್ಯತ್ವ ನೊಂದಣಿ ಮಾಡುವಂತೆ ರಾಜ್ಯ ಘಟಕ ಸೂಚಿಸಿದೆ. ಅಲ್ಲದೆ ವಿವಿಧ ಘಟಕಗಳ ರಚನೆಗೂ ಸೂಚಿಸಿದೆ. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ನಿಷ್ಠೆಯಿಂದ ಸಂಘಟನೆಗೆ ಮುಂದಾದರೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದರು.
ಜಿಲ್ಲಾಧ್ಯಕ್ಷ ಜಯಣ್ಣ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ಸದಸ್ಯತ್ವ ಅಭಿಮಾನ ಆರಂಭವಾಗಿದ್ದು ಇಡೀ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರುಗಳನ್ನು ನೊಂದಾಯಿಸಬೇಕು ಎಂದು ಕರೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಹಿರಿಯು ಮುಖಂಡರುಗಳಾದ ನಾಗಣ್ಣ, ಆಶ್ರಫ್ ಸೇರಿದಂತೆ ಪಕ್ಷದ ಕಾರ್ಯಕರ್ತರುಗಳು ಮುಖಂಡರುಗಳು ಉಪಸ್ಧಿತರಿದ್ದರು.
ಇದೇ ಸಂಧರ್ಬದಲ್ಲಿ ಸಾಕಷ್ಟು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು.